ಬಾಲಕನಿಗೆ ಬೆಂಕಿಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ..
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 30
ಹೆತ್ತ ಕಂದಮ್ಮಗಳಿಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಹೃದಯವಿದ್ರಾವಕ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಹೆಬ್ಬಳ್ಳಿ ಗ್ರಾಮದ ಲಕ್ಷ್ಮೀ ಶರಣಪ್ಪ ಸೂರ್ಯವಂಶಿ ಎಂಬ ತಾಯಿಯೇ ಆತ್ಮಹತ್ಯೆಗೆ ಯತ್ನಿಸಿದ್ದು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಈರಣ್ಣ ಎಂಬ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದು, ತಾಯಿ ಲಕ್ಷ್ಮೀ ಮತ್ತು ಒಂದು ವರ್ಷದ ಬಾಲಕ ಶಿವಾಜಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂಜಾನೆ ಪತಿ ಶರಣಪ್ಪ ಕೆಲಸಕ್ಕೆ ಹೋಗಿದ್ದಾನೆ. ಮಕ್ಕಳು ಶಾಲೆಯಿಂದ ಆಗಮಿಸಿದ ನಂತರ ಮನೆಯಲ್ಲಿಯೇ ಮಕ್ಕಳನ್ನು ಕರೆದುಕೊಂಡು ಸೀಮೆಎಣ್ಣಿ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ. ತಾಯಿ ಲಕ್ಷ್ಮೀ ಮತ್ತು ಶಿವಾಜಿ ದೇಹ ಶೇ. 90ರಷ್ಟು ಭಾಗ ಸಂಪೂರ್ಣವಾಗಿ ಸುಟ್ಟಿದೆ ಎಂದು ತಿಳಿದು ಬಂದಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.