ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಾಧನೆಗೆ ಗುರುಗಳ ಮಾರ್ಗದರ್ಶನ ಅವಶ್ಯ

Mainashree
Updated On : 1 Oct 2013, 10:41 am

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 30
ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಗುರುಗಳು ಮತ್ತು ತಂದೆ-ತಾಯಿಯ ಆಶೀರ್ವಾದ ಹಾಗೂ ಮಾರ್ಗದರ್ಶನ ತುಂಬ ಅಗತ್ಯವೆಂದು ಕರ್ನಾಟಕ ವಿವಿ ಕುಲಸಚಿವರಾದ ಡಾ. ಚಂದ್ರಮಾ ಕಣಗಲಿ ಹೇಳಿದರು.
ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಲಾದ ಎರಡು ದಿನದ ವಲಯ ಮಟ್ಟದ ಯುವಜನೋತ್ಸವವನ್ನು ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಹುಮಾನಕ್ಕಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಬಾರದು. ವಿವಿಧ ಸ್ಪರ್ಧೆಗಳಲ್ಲಿ ಕಲೆಯನ್ನು ಪ್ರದರ್ಶಿಸುವುದು ಒಂದು ಕೌಶಲ್ಯ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಕಟ್ಟಿಮನಿ, ಕವಿವಿ ಮುಂದಿನ ಹತ್ತು ವರ್ಷಗಳವರೆಗೆ ಹು-ಧಾ ಅವಳಿ ನಗರದ ಎಲ್ಲ ಮಹಾವಿದ್ಯಾಲಯಗಳಲ್ಲಿ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ. ಪ್ರಥಮ ಎರಡು ವರ್ಷಗಳ ಆಯೋಜನಾ ಆತಿಥ್ಯ ಕರ್ನಾಟಕ ಕಾಲೇಜಿಗೆ ದೊರಕಿದೆ ಎಂದರು. ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ಕೆಸಿಡಿ ಸಮಾಚಾರ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಉಪಪ್ರಾಚಾರ್ಯ ಡಾ. ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿದರು. ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಎ.ಎಚ್. ಅರಳಿ, ಪ್ರೊ. ಅಹ್ಮದ ಖಾನ್. ಡಾ. ವಿ.ಕೆ. ಕೊಪ್ಪರ, ಡಾ. ಎಸ್.ಜಿ. ಜಾಧವ, ಡಾ. ಎಸ್.ಎಲ್. ಪಂಚಮುಖಿ, ಡಾ. ಎಸ್.ಎ.ಜಾಲಿಹಾಳ, ಡಾ. ರಾಜಶೇಖರ ಜಾಡರ, ಡಾ. ಎ.ಆರ್. ಯಾರ್ದಿ ಹಾಗೂ ಸುರೇಶ ಹಿರೇಮಠ ಇದ್ದರು. ಸುರಭಿ ಕುಲಕರ್ಣಿ ಮತ್ತು ಅರ್ಚನಾ ಪತ್ತಾರ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ರಾಜೇಶ್ವರಿ ಕೆಂಚಪ್ಪನವರ ಸ್ವಾಗತಿಸಿದರು. ಡಾ. ಎಂ.ಬಿ. ದಳಪತಿ ನಿರೂಪಿಸಿದರು. ಅಲ್ಲಾಭಕ್ಷ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement