ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಜೆಪಿಯಿಂದ ನೃಪತುಂಗ ಬೆಟ್ಟದಲ್ಲಿ ಪ್ರಚಾರ

Vishwanath S
Updated On : 2 Apr 2014, 11:16 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 1
ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ತಮ್ಮ ಬೆಂಬಲಿಗರೊಂದಿಗೆ ಸೋಮವಾರ ನಗರದ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದರು.
ಬೆಳಗ್ಗೆ ನೃಪತುಂಗಬೆಟ್ಟದಲ್ಲಿ ಪ್ರಚಾರ ನಡೆಸಿದ ಬಿಜೆಪಿ ಮುಖಂಡರು, ವ್ಯಾಯಾಮ ಹಾಗೂ ವಾಯು ವಿಹಾರದಲ್ಲಿ ನಿರತರಿಂದ ಮತ ಯಾಚಿಸಿದರು.
ನಂತರ ಭವಾನಿ ನಗರದ ಮನೆಯೊಂದರಲ್ಲಿ ಸಭೆ ನಡೆಸಿ, ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರು ಮಾತನಾಡಿ, ಈ ಹಿಂದಿನ ಎನ್‌ಡಿಎ ಸರ್ಕಾರದ ಸಾಧನೆ, ಧಾರವಾಡ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರ ಹಾಗೂ ನರೇಂದ್ರ ಮೋದಿ ಪ್ರಧಾನಿಯಾಗುವ ಅವಶ್ಯಕತೆ ಬಗ್ಗೆ ಮಾತನಾಡಿದರು.
ಮಾಜಿ ಮೇಯರ್ ವೀರಣ್ಣ ಸವಡಿ, ಬಿಜೆಪಿ ಮುಖಂಡರಾದ ನಾಗೇಶ ಕಲಬುರ್ಗಿ, ಪ್ರಶಾಂತ ಹಾವಣಗಿ, ದತ್ತಮೂರ್ತಿ ಕುಲಕರ್ಣಿ, ಹನುಮಂತ ಡಂಬಳ, ವಸಂತ ನಾಡಜೋಶಿ, ಸದು ಚರಂತಿಮಠ, ಸಂಜಯ ಕುಲಕರ್ಣಿ, ಪ್ರಶಾಂತ ಜೋಶಿ, ಗೋವಿಂದ ನಾಯರ, ಸುರೇಶ ಹಾವಣಗಿ, ಜಗದೀಶ ಗೋಣಿ, ಗುರು ಕುಲಕರ್ಣಿ, ಸಂತೋಶ ಮೊಹಿತೆ, ದ್ಯಾಮಣ್ಣ ಕೆರೂರ, ಸಂಧ್ಯಾ ದಿಕ್ಷೀತ್, ಲಕ್ಷ್ಮಿ ಕುಲಕರ್ಣಿ, ದೀಪಾ ಹಾವಣಿಗಿ, ಭಾರತಿ ಬಿಜಾಪುರ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement