ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಂಗ್ರೆಸ್ನಿಂದ ಅಭಿವೃದ್ಧಿ ಸಾಧ್ಯ

Rashmi Kasaragodu
Updated On : 7 Apr 2014, 12:24 pm

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸುಮಾರು ಎರಡು ದಶಕದಿಂದ ಬಿಜೆಪಿ ಅಭ್ಯರ್ಥಿಗಳು ಕಾರ್ಯನಿರ್ವಹಿಸಿದ್ದರೂ ಯಾವುದೇ ಅಭಿವೃದ್ದಿ ಮಾಡಲಾಗಿಲ್ಲ, ನಿಜವಾದ ಕೆಲಸಗಾರರು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಭಾನುವಾರ ನಗರದ ವಾರ್ಡ-52ರಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ಯ ಕಿಲ್ಲಾ, ತಬಿಬಲ್ಯಾಂಡ, ಬಾಕಳೆ ಗಲ್ಲಿ, ಶಾ ಬಜಾರ, ವಡ್ಡರ ಓಣಿ, ಮಂಟೂರ ರಸ್ತೆ, ಪತ್ತರ ಪೊಡ ಗಲ್ಲಿಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧಾರವಾಡದ ಗ್ರಾಮೀಣ ಪ್ರದೇಶದಲ್ಲಿ ವಿನಯ ಕುಲಕರ್ಣಿ ಅವರ ದೊಡ್ಡ ಅಭಿಮಾನ ಬಳಗವೇ ಇದೆ. ಅವರು ರೈತರ ಪರವಾಗಿ ರೈತರ ಜೊತೆಗೆ ಉತ್ತಮ ಒಡನಾಟದಿಂದ ಹೊಂದಿರುವುದರಿಂದ ಗ್ರಾಮೀಣ ಭಾಗದಲ್ಲಿ ಹಾಗೂ ಹುಬ್ಬಳ್ಳಿ-ಧಾರವಾಡ ನಗರದಲ್ಲಿಯೂ ಅವರಿಗೆ ಅಪಾರ ಬೆಂಬಲ ವ್ಯಕ್ತವಾಗಿದ್ದು ಗೆಲುವು ಖಚಿತವೆಂದು ಹೇಳಿದರು.
ಈ ಸಂದರ್ಭದಲ್ಲಿ ವಿನಯ ಕುಲಕರ್ಣಿ ಪತ್ನ್ನಿ ಶಿವಲೀಲಾ ಕುಲಕರ್ಣಿ ಮಾತನಾಡಿ, ಧಾರವಾಡ ಕ್ಷೇತ್ರ ಅಭಿವೃದ್ಧಿಯತ್ತ ಮುಖ ಮಾಡಬೇಕಾದರೆ ವಿನಯ ಕುಲಕರ್ಣಿಯವರಿಗೆ ಮತ ನೀಡಬೇಕೆಂದು ಕೋರಿದರು. ಸದಾನಂದ ಡಂಗನವರ, ಶಫಿ ಮುದ್ದೇಬಿಹಾಳ, ಅನ್ವರ ಮುಧೋಳ, ಹರ್ಷದ ಕಿತ್ತೂರ, ಇಬ್ರಾಹಿಂ ಲೂದಿಯಾ, ಶುಕುರ ಮುಲ್ಲಾ, ಪಟಾಣ ದಿಲ್ಲಿವಾಲಾ, ಧರ್ಮರಾಜ ಅಬ್ಬಯ್ಯ, ವಾದಿರಾಜ, ಇಕ್ಬಾಲ್ ಬ್ಯಾಳಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement