ಧಾರವಾಡ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ
ಧಾರವಾಡ: ಧಾರವಾಡ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಇಲ್ಲಿಯ ಕೈಸ್ತ ಸಮುದಾಯದ ಮುಖಂಡರಿಗೆ ಭೇಟಿ ನೀಡಿ ಮಾತಯಾಚಿಸಿದರು. ನಂತರ ವಾರ್ಡ್ ನಂ.8 ರಲ್ಲಿನ ಹೆಬ್ಬಳ್ಳಿ ಅಗಸಿ ಪ್ರದೇಶಕ್ಕೆ ಬೆಂಬಲಿಗರೊಂದಿಗೆ ತೆರಳಿದ ಕುಲಕರ್ಣಿ, ಮನೆ-ಮನೆಗೆ ಭೇಟಿ ನೀಡಿ ಮತ ನೀಡುವಂತೆ ವಿನಂತಿಸಿಕೊಂಡರು. ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಇಸಬೆಲ್ಲಾ ಜೆವಿಯೆರ್, ಲಾರೆನ್ಸ್ ಝಳಕಿ, ಪೀಟರ ಡಿಮ್ಯಾಲೊ, ಗ್ರೆಗರಿ ಜೆವಿಯರ್, ಟೆರೆನ್ಸ ಪಾಲ್, ಲೂಯಿಸ ಅಂಬ್ರೂಸ್, ಸ್ಟ್ಯಾನ್ಲಿ ಗುಂಡಿ, ಮಾರ್ಟಿನ್ ಪುನಿತ್, ಸ್ಯಾಮಸನ ದಂಡಿನ, ರಾಬರ್ಟ್ ಲೋಬೊ, ಸಂಜಯ ಡಿಸೋಜಾ, ಡಾ. ವಿಜಯ ಫರ್ನಾಂಡಿಸ್, ಅಮೀತ ನೀಲಗಲ್, ಎಪಿಎಂಸಿ ಅಧ್ಯಕ್ಷ ಶಿವಶಂಕರ ಹಂಪಣ್ಣವರ, ಬಸವರಾಜ ಬಿಕ್ಕಣ್ಣವರ ಇದ್ದರು.
ಇಂದು ಆಮ್ ಆದ್ಮಿ ಪಾರ್ಟಿ ಸಭೆ
ಹಾವೇರಿ: ಆಮ್ ಆದ್ಮಿ ಪಾರ್ಟಿಯಿಂದ ಏ. 7ರಂದು ನಗರದ ಕೆನರಾ ಬ್ಯಾಂಕ್ ಕೆಳಗಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಂದಿನ ರೂಪುರೇಷೆಗಳ ಕುರಿತು ಚರ್ಚಿಸಿ, ಜಾರಿಗೊಳಿಸಲಾಗುವುದು. ಕಾರಣ ಜಿಲ್ಲೆಯ ಕಾರ್ಯಕರ್ತರು ಸಭೆಗೆ ತಪ್ಪದೇ ಹಾಜರಾಗುವಂತೆ ಕ್ಷೇತ್ರದ ಅಭ್ಯರ್ಥಿ ಹಸನಅಲಿ ಸರ್ಕಾಜಿ ಮತ್ತು ಶಿವಾನಂದ ಹಳ್ಳೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.