ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿ: ಪ್ರಹ್ಲಾದ ಜೋಶಿ ಪ್ರಚಾರ ಇಂದು

Rashmi Kasaragodu
Updated On : 7 Apr 2014, 12:24 pm

ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಏ. 7ರಂದು ಬೆಳಗ್ಗೆ 9ಕ್ಕೆ ಧಾರವಾಡದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜರುಗುವ ಎಸ್.ಸಿ, ಎಸ್.ಟಿ ಮೋರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 2 ಘಂಟೆಗೆ ಧಾರವಾಡದ ಕೊರ್ಟಗೆ ಭೇಟಿ ಕೊಡುವರು. ಇವರೊಟ್ಟಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಪಾಲ್ಗೊಳ್ಳುವರು. ನಂತರ ಸಂಜೆ 5 ರಿಂದ ರಾತ್ರಿ 9.30 ರವರೆಗೆ ಸವಣೂರಿನಲ್ಲಿ ರೋಡ್ ಶೋದಲ್ಲಿ ಪಾಲ್ಗೊಳ್ಳುವರು. ಬಸವರಾಜ ಬೊಮ್ಮಾಯಿ ಉಪಸ್ಥಿತರಿರುವರು.


ಬಿಜೆಪಿ ಸಂಸ್ಥಾಪನಾ ದಿನಾಚಾರಣೆ


ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚಾರಣೆಯನ್ನು ಹುಬ್ಬಳ್ಳಿ ತಾಲ್ಲೂಕಿನ ತಿಮ್ಮಸಾಗರ  ಹಾಗೂ ಬುಡರಶಿಂಗಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಚುನಾವಣಾ ಪ್ರಚಾರ ಮಾಡುವ  ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಅಧ್ಯಕ್ಷರಾದ  ಬಸನಗೌಡ್ರ ಶಿವನಗೌಡ್ರ, ಮಹಿಳಾ ಅಧ್ಯಕ್ಷರಾದ ಗೌರಮ್ಮಾ ಹರಿಜನ,  ಜಿ.ಪಂ. ಸದಸ್ಯರಾದ ಪಿ.ಜಿ. ಬಾಲನ್ನವರ, ಉಮೇಶ ಕುಸಗಲ್ಲ,  ಶೇಖಣ್ಣ ಉಣಕಲ್ಲ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement