ಇಂದು ಸಕ್ಕರೆ ಕಾಯಿಲೆ, ನೇತ್ರ ತಪಾಸಣೆ ಶಿಬಿರ
ಧಾರವಾಡ: ಇಲ್ಲಿಯ ಎಸ್ ಡಿಎಂ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ತೆಯ ಆಶ್ರಯದಲ್ಲಿ ಏ.8 ರಿಂದ ವಿವಿಧೆಡೆ ಉಚಿತ ಸಕ್ಕರೆ ಕಾಯಿಲೆ ಹಾಗೂ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಏ. 8ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತಾಲೂಕಿನ ನಿಗದಿ ಗ್ರಾಮದ ಆನಂದ ಆಶ್ರಮದಲ್ಲಿ ಶಿಬಿರದ ನಡೆಯಲಿದೆ. ಏ. 9ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಹುಬ್ಬಳ್ಳಿಯ ಈಶ್ವರ ನಗರದ ಈಶ್ವರ ದೇವಾಲಯದಲ್ಲಿ ನಡೆಯಲಿದೆ. ಏ.10ರ ಬೆಳಗ್ಗೆ 10ರಿಂದ 1ರವರೆಗೆ ಇಲ್ಲಿಯ ಎಮ್ಮಿಕೇರಿಯ ಸ್ಟೇಶನ್ ರಸ್ತೆಯ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಎಂಬ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
13ರಿಂದ ಬೇಸಿಗೆ ಶಿಬಿರ
ಧಾರವಾಡ: ಇಲ್ಲಿಯ ಗಾಂಧಿ ಪ್ರತಿಷ್ಠಾನ ಹಾಗೂ ಸಮುದಾಯ ಘಟಕದ ವತಿಯಿಂದ ಮಕ್ಕಳ ಬೇಸಿಗೆಯ ರಂಗ ತರಬೇತಿ ಹಾಗೂ ಸಂಸ್ಕಾರ ಶಿಬಿರವನ್ನು ಏ.13 ರಿಂದ 15 ದಿನಗಳ ಕಾಲ 9.30 ರಿಂದ 5.30 ರವರೆಗೆ ನಡೆಯಲಿದೆ. ಶಿಬಿರದಲ್ಲಿ ಪ್ರಾರ್ಥನೆ, ಯೋಗ, ಬೌಧಿಕ ವಿಷಯಗಳ ಬೋಧನೆ, ಹಾಡು, ನೃತ್ಯ, ನಾಟಕ, ಆಟ, ವೈಜ್ಞಾನಿಕ ತರಬೇತಿ, ವ್ಯಕ್ತಿತ್ವ ವಿಕಾಸನಗಳನ್ನು ಹೇಳಿಕೊಡಲಾಗುವುದು. ಆಸಕ್ತರು 8 ರಿಂದ 15 ವರ್ಷ ಒಳಗಿನ ಮಕ್ಕಳು ಏ.12 ರ ಒಳಗಾಗಿ ತಮ್ಮ ಹೆಸರನ್ನು ಗಾಂಧಿ ಪ್ರತಿಷ್ಠಾನದಲ್ಲಿ ನೊಂದಾಯಿಸಬೇಕು. ಮಾಹಿತಿಗಾಗಿ ಮೊ. 89715 30525 ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಇಂದು ಎಸ್ ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಎಸ್ ಡಿಎಂ ಡಾಕ್ಟರ್ ಕಾರ್ಯಕ್ರಮದಲ್ಲಿ ಕಾಲೇಜಿನ ಡಯಾಲಿಸಿಸ್ ಚಿಕಿತ್ಸಾ ವಿಭಾಗದ ಡಾ.ಮಹೇಶ ಬೆಣ್ಣಿಕಾಳ ಮಾ. 8ರ ಸಂಜೆ 6.50 ರಿಂದ 7.20ರವರೆಗೆ ಡಯಾಲಿಸಿಸ್ ಚಿಕಿತ್ಸೆ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಆಸಕ್ತರು ದೂ.0836-2443414, 2443415, 2443416ಗೆ ಕರೆ ಮಾಡಬಹುದು ಪ್ರಕಟಣೆ ತಿಳಿಸಿದೆ.
ಕಳ್ಳನ ಬಂಧನ
ಧಾರವಾಡ: ನಗರ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿದ ಆರೋಪದ ಮೇಲೆ ಶಹರ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಫಂಡರಾಪುರ ಪಟ್ಟಣದ ಅನಿಲನಗರ ನಿವಾಸಿ ಸಚಿನ್ ಗಂಗಾಧರ ಮಾನೆ ಉರ್ಫ್ ಲಕನ್ ಅಶೋಕ ಕುಲಕರ್ಣಿ ಎಂಬು ವನೇ ಬಂಧಿತ. ಆರೋಪಿಯಿಂದ ರು. 50 ಸಾವಿರ ಮೌಲ್ಯದ 1ಕೆಜಿ ಬೆಳ್ಳಿ ಮತ್ತು ರು. 1.50 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಳ್ಳಲಾಗಿದೆ. ಇಲ್ಲಿನ ಗಾಂಧಿಚೌಕನ ಶ್ರೀರಾಮ ಬಾಗಲಕೋಟ ಎಂಬುವರ ಮನೆಯಲ್ಲಿ ಕಳೆದ ವರ್ಷ ಆರೋಪಿ ಚಿನ್ನ, ಬೆಳ್ಳಿ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ. ಕಾರವಾರ, ಬಾಗಲಕೋಟೆ ಜಿಲ್ಲೆಗಳಲ್ಲಿಯೂ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದೆ.