ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಜೋಶಿ

Rashmi Kasaragodu
Updated On : 8 Apr 2014, 12:20 pm

ಹುಬ್ಬಳ್ಳಿ:  ಭಾರತೀಯ ಜನತಾ ಪಾರ್ಟಿಯ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ಹುಬ್ಬಳ್ಳಿಯ ಆರ್ಯ ವೈಶ್ಯ ಸಮಾಜದ ಸಭೆಯಲ್ಲಿ ಸೋಮವಾರ ಮತ ಯಾಚಿಸಿದರು. ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.  ಪ್ರಮುಖವಾಗಿ ರೇಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿದ್ದು, ಗೂಡ್ಸ್ ಶೆಡ್ ಸ್ಥಳಾಂತರಿಸಲು ಹೋರಾಟ ಮಾಡಿದ್ದು ಮತ್ತು ವಿಮಾನ ನಿಲ್ದಾಣವನ್ನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೇರಿಸಲು ಸತತವಾಗಿ ಪ್ರಯತ್ನ ಮಾಡಿ ಯಶಸ್ಸಾಗಿದ್ದೇನೆ. ಅವಳಿ ನಗರದಲ್ಲಿ ಒಳರಸ್ತೆಗಳಿಗೆ ಆದ್ಯತೆ ಕೊಟ್ಟು ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅನೇಕ ಜನಪರ ಯೋಜನೆಗಳನ್ನ್ನು ಅನುಷ್ಠಾನಗೊಳಿಸಿದ್ದಾಗಿ ತಿಳಿಸಿದರು. ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಕಾಂಗ್ರೇಸ್ ಪಕ್ಷ ತಮ್ಮ ಪ್ರಧಾನಿ ಅಭ್ಯರ್ಥಿಯನ್ನ್ನು ಘೋಷಿಸಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಪ್ರಶ್ನ್ನಿಸಿದ ಅವರು, ಕಾಂಗ್ರೆಸ್ಗೆ ಸೋಲಿನ ಭಯ ಕಾಡುತ್ತಿದೆ ಎಂದರು. ಏ. 17ರಂದು ಎಲ್ಲರೂ ಮತ ಚಲಾಯಿಸಿ ಪ್ರಾಮಾಣಿಕ ಸೇವೆ ಮಾಡಿದ ತಮ್ಮನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement