ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಒಬ್ಬರಿಗೆ ಮೂರು ಮತಚೀಟಿ

Mainashree
Updated On : 9 Apr 2014, 10:14 am

ಧಾರವಾಡ: ಮತದಾನಕ್ಕಾಗಿ ಒಬ್ಬರಿಗೆ ಒಂದೇ ಗುರುತಿನ ಚೀಟಿ ನೀಡುವುದು ನಿಯಮ. ಆದರೆ ಸತ್ತೂರಿನಲ್ಲಿ ಒಬ್ಬರ ಹೆಸರಿನಲ್ಲಿ ಮೂರು ಗುರುತಿನ ಚೀಟಿಗಳು ಸಿದ್ಧವಾಗಿ, ಆ ಮತದಾರರ ಕೈಸೇರಿವೆ. ಇಂಥ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.
ಇದೇಕೆ ಎಂದು ಕೇಳಿದರೆ, ನಮಗೆ ಗೊತ್ತಿಲ್ಲ ಎಂದು ಗುರುತಿನ ಚೀಟಿ ಹಂಚುವ ಪಾಲಿಕೆ ಅಧಿಕಾರಿಗಳು ಜಾರಿಕೊಂಡಿದ್ದಾರೆ. ಯಾವ ಚೀಟಿ ತೋರಿಸಿ ಮತದಾನ ಮಾಡಬೇಕು ಎಂಬ ಗೊಂದಲ ಜನರನ್ನೂ ಕಾಡುತ್ತಿದೆ.
ಸತ್ತೂರು ಕಾಲನಿ ನಿವಾಸಿ ಶರಣಪ್ಪಗೌಡ ಪಾಟೀಲ ಎಂಬುವರ ಪತ್ನಿ ನಂದಿನಿ ಪಾಟೀಲ ಅವರ ಹೆಸರಿನಲ್ಲಿ ಮೂರು ಮತಚೀಟಿಗಳನ್ನು ನೀಡಲಾಗಿದೆ. ಪ್ರತಿಯೊಂದರಲ್ಲೂ ಬೇರೆ ಬೇರೆ ಸಂಖ್ಯೆ ಇದೆ. ಮತದಾರರ ಪಟ್ಟಿಯಲ್ಲಿ ಯಾವ ಸಂಖ್ಯೆಯ ಮುಂದೆ ತಮ್ಮ ಹೆಸರಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ.
ಕೆಲವು ಮತಚೀಟಿಗಳಲ್ಲಿ ಹೆಸರುಗಳು ಬದಲಾಗಿವೆ. ಗಂಡ, ತಂದೆಯ ಹೆಸರೂ ತಪ್ಪಿದೆ. ನಂದಿನಿ ಪಾಟೀಲರ ಮತಚೀಟಿಯಲ್ಲಿ ಪತಿ ಶರಣಪ್ಪಗೌಡ ಅವರ ಹೆಸರು ಸೇರಿಸುವಂತೆ ಅರ್ಜಿ ಸಲ್ಲಿಸಿದರೆ, ಶರಣಪ್ಪಗೌಡ ಅವರ ಹೆಸರನ್ನು ನಂದಿನಿ ತಂದೆಯ ಹೆಸರಿನ ಜಾಗೆಯಲ್ಲಿ ನಮೂದಿಸಿದ್ದಾರೆ. ಕಳೆದ ವರ್ಷ ತಮ್ಮ ಮದುವೆಯಾಗಿದ್ದು, ಮದುವೆ ಪ್ರಮಾಣಪತ್ರ ಸಲ್ಲಿಸಿದ್ದರೂ ಮತಚೀಟಿಯಲ್ಲಿ ತಪ್ಪಾಗಿ ನಮೂದಿಸಿದ್ದಾರೆ ಎಂದು ಶರಣಪ್ಪಗೌಡ ಆರೋಪಿಸುತ್ತಾರೆ. ಸುವರ್ಣ ಗಂಧದ ಮತ್ತು ನವೀನ ದೇಶಮುಖ ಎಂಬುವವರಿಗೂ ಎರಡೆರಡು ಮತಚೀಟಿಗಳನ್ನು ನೀಡಿದ್ದಾರೆ. ಇಂಥ ತಪ್ಪುಗಳನ್ನು ಸರಿಪಡಿಸುವಂತೆ ಜನತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement