ಕಾಂಗ್ರೆಸ್ ಬೆಂಬಲಿಸಿ:ಸಂತೋಷ ಲಾಡ್
ಕಲಘಟಗಿ: ಕೇಂದ್ರದ ಯುಪಿಎ ಸರ್ಕಾರದ ಜನಪರ ಯೋಜನೆಗಳನ್ನು ಗಮನಿಸಿ ಧಾರವಾಡ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಮತ ನೀಡಿ ಎಂದು ಶಾಸಕ ಸಂತೋಷ ಲಾಡ್ ವಿನಂತಿಸಿಕೊಂಡರು.
ತಾಲೂಕಿನ ತಂಬೂರ, ಜುಂಜನಬೈಲ್, ದೇವಿಕೊಪ್ಪ ಗ್ರಾಮಗಳಲ್ಲಿ ಮತದಾರರ ಮನೆ-ಮನೆಗೆ ತೆರಳಿ ಸೋಮವಾರ ಮತಯಾಚನೆ ಮಾಡಿದ ಅವರು, ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಜನಪಯೋಗಿ ಕಾರ್ಯಗಳನ್ನು ಕೈಗೊಂಡಿದ್ದೇವೆ ಎಂದು ನೆನಪಿಸಿಕೊಂಡರು. ಧಾರವಾಡ ಲೋಕಸಭೆ ಕ್ಷೇತ್ರವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಮತದಾರರು ಬೆಂಬಲಿಸಬೇಕೆಂದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ವೈ. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ ಮುರಳ್ಳಿ, ಎಸ್. ಎನ್.ಪಾಟೀಲ, ಹನುಮಂತ ಸರಾವರಿ, ಎನ್.ಬಿ.ಕುರಿ, ಚನ್ನಯ್ಯ ಹಿರೇಮಠ, ಸುಧೀರ ಬೋಳಾರ, ರಾಜು ಭಜಂತ್ರಿ, ಯಲ್ಲಪ್ಪ ಚವರಗಿ, ಮತ್ತಿತರರು ಪಾಲ್ಗೊಂಡಿದ್ದರು.