ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರಹ್ಲಾದ ಜೋಶಿ ಪರ ಡಾ. ಕೋರೆ ಪ್ರಚಾರ

Mainashree
Updated On : 10 Apr 2014, 10:10 am

ಧಾರವಾಡ: ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಬುಧವಾರ ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಮತಯಾಚಿಸಿದರು.
ಕ್ಲಾಸಿಕ್ ತರಬೇತಿ ಕೇಂದ್ರ, ಕೆಎಲ್‌ಇ ಸಂಸ್ಥೆಯ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹಂಚಿನಮನಿ ಶಿಕ್ಷಣ ಸಂಸ್ಥೆ, ಆರ್‌ಎಲ್‌ಎಸ್ ಶಿಕ್ಷಣ ಸಂಸ್ಥೆಗಳ ಜೊತೆಗೆ ಕರ್ನಾಟಕ ಕಾಲೇಜು, ಜೆಎಸ್ಸೆಸ್ ಡಂಬಳ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪ್ರಹ್ಲಾದ ಜೋಶಿಗೆ ಮತ ನೀಡುವಂತೆ ಮನವಿ ಮಾಡಿದರು.ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾದರೆ ಭಾರತದ ಆರ್ಥಿಕಾಭಿವೃದ್ಧಿ ಜೊತೆಗೆ ಶೈಕ್ಷಣಿಕ ರಂಗದಲ್ಲಿ ಬದಲಾವಣೆ ತರಲಿದ್ದಾರೆ. ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಯುವಶಕ್ತಿ ಅವಶ್ಯ.  ಮೋದಿ ಕನಸಿನ 'ಏಕ್ ಭಾರತ ಶ್ರೇಷ್ಠ' ಭಾರತ್ ಘೋಷಣೆ ಸಾಕಾರವಾಗಬೇಕಾದರೆ ಪ್ರಜ್ಞಾವಂತರು ಮತ ಚಲಾಯಿಸಿ ದೇಶದ ಭದ್ರತೆಗೆ ಅಡಿಪಾಯ  ಹಾಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ, ಲಕ್ಷ್ಮಣ ಉಪ್ಪಾರ, ಸುನೀಲ ಸರೂರ, ಮೋಹನ ರಾಮದುರ್ಗ, ಸಂತೋಷ ದೇವರಡ್ಡಿ, ಸಿದ್ದು ಕಲ್ಯಾಣಶೆಟ್ಟಿ, ಭೀಮು ಸವನೂರ, ಸುನಿಲ ಮೋರೆ, ರಾಕೇಶ ದೊಡಮನಿ, ಹರೀಶ ಮನಕವಾಡ, ಶ್ರೀನಿವಾಸ ಸುರೇಶ ಖರಾಡೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement