ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆಶ್ರಯ ಮನೆ ನೀಡಿದ್ದು ಇಂದಿರಾಗಾಂಧಿ

Mainashree
Updated On : 11 Apr 2014, 10:35 am

ನವಲಗುಂದ: ಬಡವರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 10 ಲಕ್ಷ ಆಶ್ರಯ ಮನೆಗಳನ್ನು ನೀಡಿರುವ ಸಂಗತಿ ಮರೆಯಬಾರದು. ಕೋಟಿ ಲೆಕ್ಕದಲ್ಲಿ ಲೂಟಿ ಮಾಡಿರುವ ಬಿಜೆಪಿ ಇದೀಗ ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕೆ ನೈತಿಕ ಹಕ್ಕು ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗುರುವಾರ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಚುನಾವಣೆ ಪ್ರಚಾರ ಮಾಡಿದ ಅವರು, ಗುಜರಾತ್‌ನಲ್ಲಿ ಅಭಿವೃದ್ದಿ ಆಗಿಲ್ಲ. ಮಹಿಳೆಯರು ಹಾಗೂ ಬಡವರ ಆರೋಗ್ಯಕ್ಕಾಗಿ ಅಲ್ಲಿ ಯೋಜನೆಗಳನ್ನು ರೂಪಿಸಿಲ್ಲ.  ಶ್ರೀಮಂತರಿಗೆ ಮಾತ್ರ ಪ್ರಾಮುಖ್ಯ ನೀಡಿ ಬಡವರನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಒಂದು ರುಪಾಯಿಗೆ ಕೆಜಿ ಅಕ್ಕಿ ಬಡ್ಡಿ ಸಹಿತ ರು. 2,400 ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಉದ್ಯೋಗ ಖಾತ್ರಿ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್, ಬಿಜೆಪಿ ಸರ್ಕಾರ ಬರೀ 5 ವರ್ಷದಲ್ಲಿ 50 ವರ್ಷಗಳಷ್ಟು ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆಗೆ ರು. 4,400 ಕೋಟಿ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ತಾಲೂಕಾಧ್ಯಕ್ಷ ಆರ್.ಎಚ್. ಕೋನರಡ್ಡಿ, ಕೆ.ಎನ್.ಗಡ್ಡಿ, ಜಿಲ್ಲಾಧ್ಯಕ್ಷ ಎಚ್.ವಿ. ಮಾಡಳ್ಳಿ, ಉಪಾಧ್ಯಕ್ಷ ಎಸ್.ಸಿ. ರೇಣುಕಮಠ, ಎಫ್.ಎಚ್. ಜಕ್ಕಪ್ಪನವರ, ವೇದವ್ಯಾಸ ಕೌಲಗಿ, ವಿ.ಡಿ. ಕಾಮರಡ್ಡಿ, ಐ.ಎಸ್. ಪಾಟೀಲ, ಸದಾನಂದ ಡಂಗನವರ, ಡಾ.ಆರ್.ಬಿ. ಶಿರಿಯಣ್ಣವರ, ಪ್ರಕಾಶ ಅಂಗಡಿ, ಅಶೋಕ ಕುಸುಗಲ್ಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement