ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿವಿ ಆವರಣದಲ್ಲಿ ತಂಬಾಕು ನಿಷೇಧಕ್ಕೆ ಆಗ್ರಹ

Mainashree
Updated On : 11 Apr 2014, 10:35 am

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ, ಆವರಣದಲ್ಲಿ ಗುಟ್ಕಾ ಸೇವನೆ ಹಾಗೂ ಧೂಮಪಾನ ನಿಷೇಧಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ನಿಂದ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕವಿವಿಯ ಹೆಚ್ಚಿನ ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಆವರಣದಲ್ಲಿರುವ ಎಲ್ಲ ಅಂಗಡಿಗಳಲ್ಲಿ ಗುಟ್ಕಾ, ಗಾಂಜಾ, ಸಿಗರೇಟ್ ಯಥೇಚ್ಛವಾಗಿ ಮಾರಾಟವಾಗುತ್ತಿವೆ. ಇದರಿಂದ ಕಾಲೇಜಿನ ಘನತೆಗೆ ಧಕ್ಕೆಯುಂಟಾಗುವುದರೊಂದಿಗೆ, ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ಹಾಗೂ ಇಲ್ಲಿನ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಇಲ್ಲ. ಅಪರಿಚಿತ ವ್ಯಕ್ತಿಗಳು ಕಾಲೇಜಿನ ಆವರಣದಲ್ಲಿ ನುಗ್ಗಿ ಅಸಭ್ಯವಾಗಿ ವರ್ತಿಸಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಆದ್ದರಿಂದ ಕುಲಪತಿಗಳು ಕೂಡಲೇ ಆವರಣದಲ್ಲಿರುವ ಎಲ್ಲ ಅಂಗಡಿಗಳಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮತ್ತು ಅಪರಿಚಿತರಿಗೆ ಒಳಗೆ ಪ್ರವೇಶ ನಿಷೇಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಸಿದರು.
ಸಂದೀಪ ಕೋಲುರುಗಿ, ಈರಪ್ಪ, ಮಂಜುನಾಥ ಗೂರುವನಕೊಳ್ಳ, ಯಲ್ಲನಗೌಡ, ದೀಪಾ ಅಂಗಡಿ, ಸಾವಿತ್ರಿ ಹಿರೇಮಠ, ಚೇತನಾ ಬಂಡರಗಲ್ಲಿ, ರತ್ನ ಹಿರೇಮಠ, ಗೀತಾ ಕೊಪ್ಪದ, ಆರತಿ ತಮದಡ್ಡಿ, ಮೈತ್ರಾ ಕರಡಿ, ರೇಣುಕಾ ರೋಣದ, ಲಕ್ಷ್ಮೀ ಮಾದರ, ನಸರತ್‌ಬಾನು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement