ಹಿರೇಗುಂಜಳ: ಮತ ಜಾಗೃತಿ ಜಾಥಾ
ಧಾರವಾಡ: ಕುಂದಗೋಳ ತಾಲೂಕಿನ ಹಿರೇಗುಂಜಳದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಸಾಕ್ಷರ ದೀಪ ಸಮಿತಿ, ತಾಲೂಕು ಪಂಚಾಯಿತಿ, ಹಿರೇಗುಂಜಳದ ಗ್ರಾಪಂ, ಸರ್ಕಾರಿ ಪ್ರೌಢ ಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಇತ್ತೀಚೆಗೆ ಮತದಾನ ಜಾಗೃತಿ ಜಾಥಾ ನಡೆಯಿತು.
ಕುಂದಗೋಳ ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಎಂ.ಎನ್. ಜೋಶಿ ಚಾಥಾಕ್ಕೆ ಚಾಲನೆ ನೀಡಿದರು. ಏ.17 ರಂದು ಮತದಾರರು ಮತದಾನ ಮಾಡುವುದು ಅವರ ಹಕ್ಕು. ತಾವು ಮತಚಲಾಯಿಸುವ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎನ್.ವೈ. ಸುಣಗಾರ ಮತ ಹಾಕುವವ ಪ್ರಜಾಪ್ರಭುತ್ವದಲ್ಲಿ ಹಿರೋ ಎಂಬ ನಾಮಫಲಕ ತೋರಿಸುವ ಕಲಾ ಜಾಥಾಕ್ಕೆ ಚಾಲನೆ ನೀಡಿದರು.
ಸಾಕ್ಷರತಾ ಕಲಾ ತಂಡದವರು, ಸ್ವಯಂ ಸೇವಕರು ಹಾಗೂ ಶಾಲಾ ಮಕ್ಕಳೊಂದಿಗೆ ಗ್ರಾಮದ ಬೀದಿ-ಬೀದಿಗಳಲ್ಲಿ ಮತದಾನ ಜಾಗೃತಿ ಹಾಡುಗಳನ್ನು ಹಾಗೂ ಮತದಾನ ನನ್ನ ಹಕ್ಕು ಎಂಬ ಬೀದಿ ನಾಟಕ ಪ್ರಸ್ತುತಪಡಿಸಿದರು. ಸತೀಶ ಶಿವಪಯ್ಯನಮಠ, ಎಸ್.ಆರ್. ರಾಚಣ್ಣವರ, ಶಿವಾನಂದ ಗಡ್ಡಿ, ಶಿವಪ್ಪ ಸತಾರೆ, ಅಭಿನಯಿಸಿ ಮತದಾನದ ಸಂದೇಶ ನೀಡಿದರು.
ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ ಉಪ್ಪಿನ, ವಿ.ಎಫ್. ಕೋಟಗಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೋಳಿವಾಡ ಇದ್ದರು.