ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರಶ್ನೆ ಎದುರಿಸದೇ ಖಾದ್ರಿ ಪರಾರಿ

Mainashree
Updated On : 12 Apr 2014, 10:11 am

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 11
ಇಲ್ಲಿನ ರಂಗಾಯಣದಲ್ಲಿ ಶುಕ್ರವಾರ ನಡೆದ ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಸಮಾರೋಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಆಗಮಿಸಿದ್ದ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಕೇಳುಗರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಓಡಿ ಹೋದರು.
ಪ್ರೆಸ್ ಕ್ಲಬ್ ವತಿಯಿಂದ ನಡೆದ ಈ ಸಮಾರಂಭದಲ್ಲಿ ಎಲ್ಲ ಪಕ್ಷಗಳ ಮುಖಂಡರಿಗೂ ಪ್ರೇಕ್ಷಕರು ಪ್ರಶ್ನೆ ಹಾಕಿದರು. ಆದರೆ, ಬಹುತೇಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿದರು. ಭದ್ರತೆ ವಿಷಯ ಕುರಿತಂತೆ ಪಾಕ್ ಸೈನಿಕರು ದೇಶದ ಸೈನಿಕರನ್ನು ಹತ್ಯೆ ಮಾಡಿದಾಗ ಕಾಂಗ್ರೆಸ್ ಸರ್ಕಾರವೇಕೆ ಸುಮ್ಮನೆ ಕುಳಿತಿತು ಎಂದು ಸಂವಾದದಲ್ಲಿ ಜನರು ಪ್ರಶ್ನಿಸಿದರು. ದೇಶದ ಭದ್ರತೆ, ಅಭಿವೃದ್ಧಿಗೆ ಕಾಂಗ್ರೆಸ್ ಪ್ರತ್ಯೇಕ ಬಜೆಟ್ ನೀಡಿದೆ ಎಂದು ಅಸಮಂಜಸ ಉತ್ತರ ನೀಡುತ್ತಿದ್ದಂತೆ ಜನರು ಮತ್ತೇ ಮತ್ತೆ ಪ್ರಶ್ನಿಸಿದರು. ಆಗ ಅಜ್ಜಂಪೀರ ಖಾದ್ರಿ, ನನಗೆ ಮತ್ತೊಂದು ಸಮಾರಂಭವಿದೆ ಎಂದು ಎದ್ದು ಹೋದರು.
ಬಿಜೆಪಿ ಪ್ರಹ್ಲಾದ ಜೋಶಿ ಪರವಾಗಿ ಶಾಸಕ ಅರವಿಂದ ಬೆಲ್ಲದ, ಜೆಡಿಎಸ್ ಅಭ್ಯರ್ಥಿ ಹನುಮಂತಪ್ಪ ಬಂಕಾಪುರ ಪರ ಎನ್.ಎಚ್. ಕೋನರಡ್ಡಿ, ಎಎಪಿ ಹೇಮಂತಕುಮಾರ ಪರ ಬಸವರಾಜ ಮುದಿಗೌಡರ, ಬಿಎಸ್ಪಿ ಈರಪ್ಪ ಮಾದರ ಪರವಾಗಿ ಲಕ್ಷ್ಮಣ ಬಕ್ಕಾಯಿ, ಎಸ್‌ಯುಸಿಐ ಗಂಗಾಧರ ಬಡಿಗೇರ ಪರ ರಾಮಾಂಜನಪ್ಪ ಆಲ್ದಳ್ಳಿ ಹಾಗೂ ಪಕ್ಷೇತರ ಅಭ್ಯರ್ಥಿ ಪ್ರಮೋದ ಮುತಾಲಿಕ ಪರ ಗಂಗಾಧರ ಪಾಟೀಲ ಕುಲಕರ್ಣಿ ಜನರ ಪ್ರಶ್ನೆಗಳಿಗೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement