ಭದ್ರತೆಗೆ ಬಿಜೆಪಿಗೆ ಮತ ನೀಡಿ
ಧಾರವಾಡ: ಶಾಸಕ ಅರವಿಂದ ಬೆಲ್ಲದ ಅವರು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರವಾಗಿ ಇಲ್ಲಿಯ ಕೆಲಗೇರಿ ಗ್ರಾಮದ ಆಂಜನೇಯನಗರ, ಸಾಧನಕೇರಿ, ಶ್ರೀನಗರ, ದಾನೂನಗರ, ಗಾಂಧಿನಗರ, ವಿದ್ಯಾಗಿರಿ, ತೇಜಸ್ವಿನಗರದಲ್ಲಿ ಮತಯಾಚಿಸಿದರು. ನಂತರ ನಗರದ ಆರ್‌ಎಲ್‌ಎಸ್ ಹೈಸ್ಕೂಲ್ ಹಾಗೂ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಚುನಾವಣಾ ತರಬೇತಿಗೆ ಆಗಮಿಸಿದ್ದ ಮತದಾರರಲ್ಲಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಹೇಳಿದರು. ಪಾಲಿಕೆ ಸದಸ್ಯ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಸುರೇಶ ಬೇದರೆ, ಮೋಹನ ರಾಮದುರ್ಗ, ಉದಯ ಲಾಡ್, ಸಂತೋಷ ದೇವರೇಡ್ಡಿ, ಸಂತೋಷ ಬೆಣ್ಣಿ, ನಾಗರಾಜ ನಾಯಕ, ಸಿದ್ದು ಕಲ್ಯಾಣಶೆಟ್ಟಿ, ರಾಖೇಶ್ ನಾಜರೆ, ಹರೀಶ ಮಣಕವಾಡ, ಶ್ರೀನಿವಾಸ, ಸುನೀಲ ಸಂಡೂರ ಇದ್ದರು.