ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಲಘಟಗಿ: ಆಪ್ ಅಭ್ಯರ್ಥಿ ಪ್ರಚಾರ

Lingaraj Badiger
Updated On : 13 Apr 2014, 10:16 am

ಹುಬ್ಬಳ್ಳಿ: ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಹೇಮಂತಕುಮಾರ್  ಪಾಂಚಾಳ ಮತ್ತು ಆಪ್ ಕಾರ್ಯಕರ್ತರು ಕಲಘಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ತಾಲೂಕಿನ ದುಮ್ಮಡ, ಯರಿಕೊಪ್ಪ, ಹಿರೇಹೊನ್ನಳ್ಳಿ, ದಾಸ್ತಿಕೊಪ್ಪ ಗ್ರಾಮಗಳಲ್ಲಿ ಮೊದಲು ಚುನಾವಣಾ ಪ್ರಚಾರ ಕೈಗೊಂಡು ನಂತರ ಕಲಘಟಗಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಪಾದಯಾತ್ರೆ ಕೈಗೊಂಡರು.
ಹಿರೇಹೊನ್ನಳ್ಳಿ ಗ್ರಾಮದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಹೇಮಂತಕುಮಾರ್, ಮನೆ ಸ್ವಚ್ಛವಾಗಿ ಇರಿಸಿಕೊಳ್ಳಲು ಪೊರಕೆ ಅಗತ್ಯವಾಗಿದ್ದು, ಅದೇ ರೀತಿ ರಾಜಕೀಯ ವ್ಯವಸ್ಥೆ ಸರಿಪಡಿಸಲು ಆಮ್ ಆದ್ಮಿ ಪಾರ್ಟಿ ಅಗತ್ಯವಾಗಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಆಯ್ಕೆಯಾದ ನಂತರ ಭರವಸೆಗಳನ್ನು ಈಡೇರಿಸದಿದ್ದರೆ ನ್ಯಾಯಾಂಗ ಮುಖಾಂತರ ನನ್ನ ಪ್ರಾತಿನಿಧಿತ್ವವನ್ನು ರದ್ದುಗೊಳಿಸುವ ಕ್ಷೇತ್ರದ ಮತದಾರರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಈ ವಿಷಯದಲ್ಲಿ ನಾನು ನಡೆದುಕೊಂಡಂತೆ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿದರು.
ಚುನಾವಣೆ ಪ್ರಚಾರದಲ್ಲಿ ಅಫ್ಜಲ್ ಖಾಜಿ, ಮರೀಶ ನಾಗನ್ನವರ, ಬೆಂಗಾಲಿ, ಗದಗಕರ್, ಬಸವರಾಜ ಮುದಿಗೌಡರ ಇದ್ದರು. ಎಸ್.ಎಫ್. ಪಾಟೀಲ ನೇತೃತ್ವದಲ್ಲಿ ಆಪ್‌ನ ಇನ್ನೊಂದು ಕಾರ್ಯಕರ್ತರ ತಂಡ ಬಡಾ, ಮನಗುದ್ನಿ, ಮನಸೂರ, ಕ್ಯಾರಕೊಪ್ಪ, ಅಣ್ಣಿಗೇರಿ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡಿತು.
--
ಇಂದು ವೀರಶೈವ ಮುಖಂಡರ ಸಭೆ
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಸಮಸ್ತ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಭೆ ಏ. 13ರ ಬೆಳಗ್ಗೆ 11ಕ್ಕೆ ಬಮ್ಮಾಪುರ ಓಣಿ ಶ್ರೀ ಗುರುಸಿದ್ದೇಶ್ವರ ಕಲ್ಯಾಣ ಮಂಟಪ (ಓಲಿಮಠ)ದಲ್ಲಿ ಹಮ್ಮಿಕೊಳ್ಳಲಾಗಿದೆ. ಧಾರವಾಡ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸುವ ಕುರಿತಂತೆ ನಿರ್ಣಯ ಕೈಗೊಳ್ಳಲಾಗುವುದು. ಹು-ಧಾ ಪೂರ್ವ ವಿಧಾನಸಭೆ ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದು, ಉದ್ಘಾಟಕರಾಗಿ ಎಸ್.ಆರ್. ಪಾಟೀಲ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ರಾಣಿ ಸತೀಶ, ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ, ಜಿ.ಎಂ. ಚಿಕ್ಕಮಠ, ಪಿ.ಸಿ. ಸಿದ್ದನಗೌಡ್ರ, ಮಂಜುನಾಥ ಕುನ್ನೂರ ಆಗಮಿಸಲಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿಯೂ ಆಗಿರುವ ವೀರಶೈವ ಲಿಂಗಾಯತ ಮುಖಂಡ ಮೆಣಸಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement