ಮತ ಹಾಕುವವ ಹಿರೋ, ಹಾಕದವ ಝಿರೋ
ಧಾರವಾಡ: ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಸಾಕ್ಷರ ದೀಪ ಸಮಿತಿ, ತಾಲೂಕು ಪಂಚಾಯಿತಿ ಹಾಗೂ ಶಲವಡಿ ಗ್ರಾಮ ಪಂಚಾಯಿತಿ ವತಿಯಿಂದ ಭಾನುವಾರ ಚಕ್ಕಡಿಯ ಮೂಲಕ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.
ಅಭಿಯಾನದಲ್ಲಿ ಗ್ರಾಮದ ರೈತರು ಎತ್ತು, ಚಕ್ಕಡಿಗಳನ್ನು ಸಿಂಗರಿಸಿ ಗ್ರಾಮದ ಬೀದಿ-ಬೀದಿಗಳಲ್ಲಿ ಮತದಾನ ಜಾಗೃತಿ ಮಾಡಿದರು. ಕಡ್ಡಾಯವಾಗಿ ಮತದಾನ ಮಾಡಬೇಕು, ಮತದಾನ ಮಾಡುವವನೇ ದೇಶದ ಹಿತ ಕಾಯುತ್ತಾನೆ. ವೋಟು ಹಾಕುವವನು ಹಿರೋ, ವೋಟು ಹಾಕದೇ ಇರುವವ ಝೀರೋ, ಮತ ಹಾಕುವುದು ನಮ್ಮ ಜನ್ಮಸಿದ್ಧ ಹಕ್ಕು ಇತ್ಯಾದಿ ಘೋಷಣೆ ಗಮನ ಸೆಳೆದವು.
ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಬಿ. ಶ್ರೀನಿವಾಸ, ಚಕ್ಕಡಿಯನ್ನು ಓಡಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಎನ್.ವೈ. ಸುಣಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ, ಎಸ್.ಎಸ್. ಸೌದಾಗರ, ನಂದಾ, ಎ.ಡಿ. ವಿಠ್ಠಲರಾವ್, ಡಾ. ಎಚ್.ಎಚ್. ಕುಕನೂರ, ಎಸ್.ಎಸ್. ತಿವಾರಿ, ಶರಣಬಸಪ್ಪ, ಯು.ಎಸ್. ಕಾಳೆ, ಪಿ.ವೈ. ಪಡಸುನಗಿ, ತಾಲೂಕಿನ ವಿವಿಧ ಇಲಾಖೆ ನೌಕರರು ಸೇರಿದಂತೆ ಶೆಲವಡಿ ಗ್ರಾಮ ಹಾಗೂ ಸುತ್ತ ಮುತ್ತಲಿನ ಸಾಕ್ಷರತಾ ಕಾರ್ಯಕರ್ತರು, ಆಶಾ ಕಾರ್ಯಕರ್ತತರು ಮತ್ತು ಅಂಗನವಾಡಿ ಸಹಾಯಕರು ಪಾಲ್ಗೊಂಡಿದ್ದರು.