ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮತದಾರ ಪಟ್ಟಿ: ಗೊಂದಲ ಗೂಡು

Lingaraj Badiger
Updated On : 14 Apr 2014, 11:23 am

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 13
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಜಾರಿ ಮಾಡಿರುವ ಕಟ್ಟುನಿಟ್ಟಿನ ನೀತಿ ಸಂಹಿತೆಯಿಂದ ಎಲ್ಲರಿಂದಲೂ ಭೇಷ್ ಎನ್ನಿಸಿಕೊಂಡಿರುವ ಚುನಾವಣಾ ಆಯೋಗ ಮತದಾರ ಪಟ್ಟಿಯಲ್ಲಿ ಗೊಂದಲ ಮೂಡಿಸಿ ಜನರಲ್ಲಿ ಬೇಸರ ತರಿಸಿದೆ.
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಆಗಿದ್ದ ಹಲವು ತಪ್ಪುಗಳನ್ನು ಈ ಬಾರಿಯೂ ಆಯೋಗ ಮತದಾರ ಪಟ್ಟಿಯಲ್ಲಿ ಪುನರಾವರ್ತಿಸಿದೆ. ಇತ್ತೀಚೆಗೆ ಧಾರವಾಡದಲ್ಲಿ ಒಬ್ಬ ಮತದಾರರಿಗೆ ಮೂರು-ನಾಲ್ಕು ಗುರುತಿನ ಚೀಟಿ ನೀಡಿರುವ ಸಂಗತಿ ಬೆಳಕಿಗೆ ಬಂದ ಬೆನ್ನಲ್ಲೆ, ಈಗ ಒಬ್ಬ ಮತದಾರನ ಹೆಸರು ಎರಡು ಬೂತ್‌ಗಳಲ್ಲಿ ದಾಖಲಾಗಿದೆ. ಇಲ್ಲಿಯ ಗುಲಂಗಜಿಕೊಪ್ಪ, ಮಾಳಾಪುರ, ಸೈದಾಪುರಗಳಲ್ಲಿ ಒಬ್ಬ ಮತದಾರನ ಹೆಸರು ವಿವಿಧ ಬೂತ್‌ಗಳಲ್ಲಿ ಕಾಣಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.  ಒಂದು ಬೂತ್ ಮತದಾರರ ಪಟ್ಟಿಯಲ್ಲಿ ಮನೆ ಸಂಖ್ಯೆ ಒಂದು ರೀತಿಯಾಗಿದ್ದರೆ, ಇನ್ನೊಂದು ಪಟ್ಟಿಯಲ್ಲಿ ಬೇರೆ ಸಂಖ್ಯೆ ಇದೆ. ವಯಸ್ಸಿನ ವ್ಯತ್ಯಾಸವು ಎರಡು ಪಟ್ಟಿಯಲ್ಲಿ ಬೇರೆ ಬೇರೆಯಾಗಿದೆ. ಇನ್ನೂ ಹಲವು ಕಡೆ ಜೀವಂತವಿರುವ ಮತದಾರರನ್ನು ಸತ್ತಿರುವ ಕಾಲಂನಲ್ಲಿ ಸೇರಿಸಲಾಗಿದೆ.  ಕಲ್ಲಪ್ಪ ಅಳಗವಾಡಿ ಅವರ ಮತಗಟ್ಟೆ ವಿಳಾಸ ಒಂದೆಡೆ 158 (ಕೃಷಿ ಮಾರುಕಟ್ಟೆ ಕಾರ್ಯಾಲಯ) ಬಂದರೆ, ಇನ್ನೊಂದೆಡೆ ಮತಗಟ್ಟೆ ಸಂಖ್ಯೆ 153 (ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂ. 13) ಬಂದಿದೆ. ಇತ್ತೀಚೆಗೆ ಕೇಂದ್ರದ ಮಾಜಿ ಸಚಿವ ಶರದ್ ಪವಾರ ಶಾಹಿ ಅಳಸಿ ಎರಡು  ಬಾರಿ ಮತದಾನ ಮಾಡಿ ಎಂದು ಹೇಳಿಕೆ ನೀಡಿ ಗೇಲಿಗೊಳಪಟ್ಟಿದ್ದರು. ಚುನಾವಣಾ ಆಯೋಗದ ಈ ಕಾರ್ಯವೈಖರಿ ನೋಡಿದಾಗ ಮತದಾರ ಎರೆಡೆರಡು ಬಾರಿಯಲ್ಲ, ಮೂರು ಬಾರಿಯಾದರೂ ಮತ ಹಾಕಬಹುದಾದ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement