ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುತಗಟ್ಟಿ: ಐದು ತಾಸು ಮತದಾನ ಬಹಿಷ್ಕಾರ

Mainashree
Updated On : 18 Apr 2014, 9:59 am

ಕನ್ನಡಪ್ರಭ ವಾರ್ತೆ, ಕಲಘಟಗಿ, ಏ. 17
ತಾಲೂಕಿನ ಗಂಜೀಗಟ್ಟಿ ಗ್ರಾಪಂ ವ್ಯಾಪ್ತಿಯ ಸುತಗಟ್ಟಿ ಗ್ರಾಮದಲ್ಲಿ ಜನರು ಮತದಾನಕ್ಕೆ ಬಹಿಷ್ಕಾರ ಹಾಕಿ, ಐದು ತಾಸು ಪ್ರತಿಭಟಿಸಿದರು.
ಗಂಜೀಗಟ್ಟಿ ಗ್ರಾಮದಿಂದ ಸುತಗಟ್ಟಿ ಸಂಪರ್ಕಿಸುವ 4 ಕಿ.ಮೀ. ರಸ್ತೆ ತುಂಬ ಹದಗೆಟ್ಟಿದ್ದು, ರಸ್ತೆ ನಿರ್ಮಾಣ, ಬಸ್ ತಂಗುದಾಣ, ಸಾರಿಗೆ ಸೌಲಭ್ಯ, ಚರಂಡಿ ದುರಸ್ತಿ, ಕಾಮಶೆಟ್ಟಿ ಕೆರೆ ದುರಸ್ತಿ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಮತಗಟ್ಟೆ ಕೇಂದ್ರ ನಂ. 166ರ 450 ಮತದಾರರು ಗುರುವಾರ ಮತದಾನ ಬಹಿಷ್ಕರಿಸಿದರು.
ಗ್ರಾಮದ ಬಸನಗೌಡಾ ಚನ್ನಪ್ಪಗೌಡ ಪಾಟೀಲ, ಶಿವನಗೌಡ ಪಾಟೀಲ, ಗ್ರಾ.ಪಂ.ಸದಸ್ಯ ಶಿವಪ್ಪ ಯರಿಕೊಪ್ಪ, ಯಲ್ಲನಗೌಡ ಪಾಟೀಲ, ಸಿದ್ದಪ್ಪ ಗುಂಡುರ ಪ್ರತಿಭಟನೆಯಲ್ಲಿದ್ದರು.
ಸುದ್ದಿ ತಿಳಿದ ತಹಸೀಲ್ದಾರ್ ಡಿ.ಎಂ. ಶಂಕರಿ, ತಾಪಂ ಇಒ ಎಸ್.ಆರ್. ವೀರಕರ, ಪಿಎಸ್‌ಐ ಶಿವಾನಂದ ಗಾಣಿಗೇರ ಗ್ರಾಮಕ್ಕೆ ಭೇಟಿ ನೀಡಿ, ಅಹವಾಲು ಆಲಿಸಿದರು. ಜಿಪಂ ಸದಸ್ಯ ಬಸವರಾಜ ಕರಡಿಕೊಪ್ಪ, ತಾಪಂ ಸದಸ್ಯ ಮಂಜುನಾಥ ಗಾಣಿಗೇರ ಅವರು ಮೂರು ತಾಸುಧರಣಿ ನಿರತರೊಂದಿಗೆ ಚರ್ಚಿಸಿ, ಮನವೊಲಿಸಿದರು.
ಸುತಗಟ್ಟಿ ಜನರ ಸಮಸ್ಯೆಗಳನ್ನು ಯಾರೂ ಕೇಳೊರೇ ಇಲ್ರ, ಅದಕ್ಕಾಗಿ ತಲಿಕೆಟ್ಟ್ ಓಟ್ ಯಾಕ್ ಹಾಕೋದು ಅಂದೆವು. ಈಗ ಚುನಾವಣೆ ಬಂದಿದ್ದರೂ ಸರಿಯಾಗಿ ಯಾವ ಪಕ್ಷದವರು ಪ್ರಚಾರಕ್ಕೂ ಬಂದಿಲ್ಲ ಎಂದು ಗ್ರಾಮದ ಜನರು ಅಳಲು ತೋಡಿಕೊಂಡರು. ಒಂದು ತಿಂಗಳ ಹಿಂದೆ ಸುತಗಟ್ಟಿ ಗ್ರಾಮದ ಹದಗೆಟ್ಟ ರಸ್ತೆಯ ಬಗ್ಗೆ 'ಕನ್ನಡಪ್ರಭ' ಬೆಳಕು ಚೆಲ್ಲಿದ್ದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement