ಅಂತರ್ ಜಿಲ್ಲಾ ಕ್ರಿಕೆಟ್ ಟೂರ್ನಿ ಆರಂಭ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್‌ಸಿಎ) ಧಾರವಾಡ ವಲಯದ ಆಶ್ರಯದಲ್ಲಿ ಶುಕ್ರವಾರದಿಂದ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ ನಗರದಲ್ಲಿ ಪ್ರಾರಂಭಗೊಂಡಿದೆ. 14, 16 ಹಾಗೂ 19 ವರ್ಷದೊಳಗಿನ ತಂಡಗಳ ಈ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ ನಗರದ ಕೆಎಸ್‌ಸಿಎ, ಕರ್ನಾಟಕ ಜಿಮಖಾನಾ ಹಾಗೂ ಬೆಳಗಾವಿಯ ಕೆಎಸ್‌ಸಿಎ ಮತ್ತು ಯೂನಿಯನ್ ಜಿಮಖಾನಾ ಮೈದಾನದಲ್ಲಿ ನಡೆಯಲಿವೆ. ನಗರದ ಕೆಎಸ್‌ಸಿಎ ಮತ್ತು ಜಿಮಖಾನಾ ಮೈದಾನದಲ್ಲಿ ಏ. 18ರಿಂದ 23ರವರೆಗೆ 16 ವರ್ಷದೊಳಗಿನವರ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ, ಏ. 24 ರಿಂದ 29ರವರೆಗೆ 14 ವರ್ಷದೊಳಗಿನವರ ಅಂತರ್ ಜಿಲ್ಲಾ ಪಂದ್ಯಾವಳಿ, ಬೆಳಗಾವಿಕೆಎಸ್‌ಸಿಎ, ಯೂನಿಯನ್ ಜಿಮಖಾನಾ ಮೈದಾನದಲ್ಲಿ 19 ವರ್ಷದೊಳಗಿನವರ ಅಂತರ್ ಜಿಲ್ಲಾ ಪಂದ್ಯಾವಳಿ ನಡೆಯಲಿವೆ.
14 ವರ್ಷದೊಳಗಿನ ಅಂತರ್ ಜಿಲ್ಲಾ ತಂಡಗಳ ಪಂದ್ಯಾವಳಿ ವಿವರ: ಏ. 24ರಂದು ಹುಬ್ಬಳ್ಳಿ-ಧಾರವಾಡ ತಂಡಗಳ ಮಧ್ಯೆ ಕೆಎಸ್‌ಸಿಎ ಮೈದಾನದಲ್ಲಿ, ಕಾರವಾರ-ಗದಗ ತಂಡಗಳ ಮಧ್ಯೆ ಕೆಜಿಜಿ ಮೈದಾನದಲ್ಲಿ, ಏ. 25ಕ್ಕೆ ಬೆಳಗಾವಿ-ಧಾರವಾಡ ತಂಡಗಳ ಮಧ್ಯೆ ಕೆಎಸ್‌ಸಿಎ ಮೈದಾನದಲ್ಲಿ, ಕಾರವಾರ-ಹುಬ್ಬಳ್ಳಿ ತಂಡಗಳ ಮಧ್ಯೆ ಕೆಜಿಜಿ ಮೈದಾನದಲ್ಲಿ, ಏ. 26ಕ್ಕೆ ಬೆಳಗಾವಿ-ಗದಗ ತಂಡಗಳ ಮಧ್ಯೆ ಕೆಎಸ್‌ಸಿಎ ಮೈದಾನದಲ್ಲಿ, ಏ. 27ಕ್ಕೆ ಕಾರವಾರ-ಧಾರವಾಡ ತಂಡಗಳ ಮಧ್ಯೆ ಕೆಎಸ್‌ಸಿಎ ಮೈದಾನದಲ್ಲಿ, ಹುಬ್ಬಳ್ಳಿ-ಗದಗ ತಂಡಗಳ ಮಧ್ಯೆ ಕೆಜಿಜಿ ಮೈದಾನದಲ್ಲಿ, ಏ. 28ಕ್ಕೆ ಕಾರವಾರ-ಬೆಳಗಾವಿ ತಂಡಗಳ ಮಧ್ಯೆ ಕೆಎಸ್‌ಸಿಎ ಮೈದಾನದಲ್ಲಿ, ಏ. 29ಕ್ಕೆ ಹುಬ್ಬಳ್ಳಿ-ಬೆಳಗಾವಿ ತಂಡಗಳ ಮಧ್ಯೆ ಕೆಎಸ್‌ಸಿಎ ಮೈದಾನದಲ್ಲಿ, ಧಾರವಾಡ-ಗದಗ ತಂಡಗಳ ಮಧ್ಯೆ ಕೆಜಿಜಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಕೆಎಸ್‌ಸಿಎ ಧಾರವಾಡ ವಲಯದ ಪ್ರಕಟಣೆ ತಿಳಿಸಿದೆ.