ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಚುನಾವಣೆ ಕಣದಿಂದ ಡೇರಿಯತ್ತ

Mainashree
Updated On : 20 Apr 2014, 11:06 am

 ಬಸವರಾಜ ಹಿರೇಮಠ
ಧಾರವಾಡ: ಗೆಲ್ಲುವ ಛಲದಿಂದ ವೈಯಕ್ತಿಕ ಬದುಕನ್ನು ಪಕ್ಕಕ್ಕಿಟ್ಟು ಸತತ ಸಂಚರಿಸುತ್ತ ಪ್ರಚಾರ ಮಾಡಿದ ವಿನಯ ಕುಲಕರ್ಣಿ, ಚುನಾವಣೆ ಮುಗಿಯುತ್ತಿದ್ದಂತೆ ನಿರಾಳರಾಗಿದ್ದಾರೆ. ಮನಸ್ಸು ಹಗುರಾಗಿದೆ. ಉಳಿದ ರಾಜಕಾರಣಿಗಳಿಗಿಂತ ಡಿಫರೆಂಟ್ ಆದ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ರೆಸಾರ್ಟ್, ದೇವಸ್ಥಾನ, ಟೂರು-ಕೇರಿಗೆ ಹೋಗದೆ ತಮ್ಮೂರು ನವಲಗುಂದ ತಾಲೂಕಿನ ನಾಯಕನೂರಿಗೆ ಹೋಗಿ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಿಂಗಳಿಂದ ಮನೆ, ಮಠ, ಕುಟುಂಬ ಎನ್ನದೆ ಪ್ರಚಾರದಲ್ಲಿ ತೊಡಗಿದರೂ ಮತದಾನದ ಮಾರನೇ ದಿನ ತಮ್ಮ ಡೇರಿಯತ್ತ ಮುಖ ಮಾಡಿದ್ದ ಅವರಲ್ಲಿ ಸುಸ್ತು ಕಾಣಿಸಲೇ ಇಲ್ಲ. ಮನೆಗೆ ಬಂದವರೊಡನೆ ನಗುನಗುತ್ತಾ ಮಾತನಾಡಿ, ಹೇಗಾಯ್ತಪ್ಪಾ ಚುನಾವಣೆ? ಗೆಲ್ತೀವೋ? ಇಲ್ವೋ? ಎಂದು ಕೇಳುತ್ತಿದ್ದರು.
ಡೇರಿಗೆ ಹೋದ್ರು: 1 ತಿಂಗಳಿಂದ ಡೇರಿಗೆ ಹೋಗಿರಲಿಲ್ಲ. ತಮ್ಮ ಪ್ರೀತಿ ಹಸುಗಳನ್ನು ಮಾತನಾಡಿಸಿರಲಿಲ್ಲ. ಡೇರಿ ಉಸ್ತುವಾರಿ ಮತ್ತೊಬ್ಬರ ಕೈಗೆ ನೀಡಿದ್ದ ಅವರು ಶುಕ್ರವಾರ ಬೆಳಗ್ಗೆ 8ರಿಂದ 10ರ ವರೆಗೂ ಮನೆಯಲ್ಲಿ ಕಾರ್ಯಕರ್ತರ ಜತೆ ಚರ್ಚಿಸಿ, ಡೇರಿಗೆ ತೆರಳಿದರು. ಡೇರಿಯಲ್ಲಿದ್ದ ಹಸುಗಳು, ಕುದುರೆ, ಎತ್ತು, ಕೋಣಗಳ ಮೈದಡವಿ ತಮ್ಮ ನೆಚ್ಚಿನ ಕುದುರೆ ಅರ್ಜುನ್ ಮೇಲೆ ಒಂದು ಸುತ್ತಿನ ಸವಾರಿ ಮಾಡಿ, 'ಈಗ ಆರಾಮ ಆತ್ ನೋಡ್ರಿ' ಎಂದು ಮುಗಳ್ನ ಕ್ಕರು. ಎತ್ತಿನ ಶರ್ಯತ್ತಿಗೆ ಎಂದು ಸಲಹುತ್ತಿರುವ ಜೋಡೆತ್ತುಗಳೊಡನೆ ಸ್ವಲ್ಪ ಸಮಯ ಕಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement