ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಿಲ್ಲಾ ಮಟ್ಟದ ಅಂಧರ ಕ್ರಿಕೆಟ್ ಟೂರ್ನಿ

Mainashree
Updated On : 21 Apr 2014, 10:05 am

ಹುಬ್ಬಳ್ಳಿ: ಹುಬ್ಬಳ್ಳಿಯ ಲಯನ್ಸ್ ಕ್ಲಬ್ ಪರಿವಾರದ ಆಶ್ರಯದಲ್ಲಿ ಇಲ್ಲಿನ ಜಿಮಖಾನಾ ಸ್ಪೋರ್ಟ್ಸ್ ಮೈದಾನದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿ ಜರುಗಿತು.
ಹುಬ್ಬಳ್ಳಿಯ ಮೂರು ತಂಡಗಳು ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡಿದ್ದು, ಹಮ್ ಕಿಸಿಸೆ ಕಮ್ ನಹಿ ಉದ್ಘೋಷದೊಂದಿಗೆ ಜಿಲ್ಲಾ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಥಮ ಬಾರಿಗೆ ಲಯನ್ಸ್ ಕ್ಲಬ್‌ನಿಂದ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಸಿದ್ಧಾರೂಢಮಠದ ಸರ್ಕಾರಿ ಅಂಧ ಮಕ್ಕಳ ಶಾಲೆಯ ತಂಡ, ಧಾರವಾಡ ಸಮರ್ಥನಂ ಸಂಸ್ಥೆಯ ಅಂಧ ಮಕ್ಕಳ ಕ್ರಿಕೆಟ್ ತಂಡ ಮತ್ತು ಚಿಕೇನಕೊಪ್ಪದ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ. ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಕ್ಲಬ್‌ನ ಮಾಜಿ ಗವರ್ನರ್‌ಗಳಾದ ಎನ್.ಪಿ. ಜವಳಿ, ಕೃಷ್ಣಾ ಪುಂಜ, ಭಾರತೀಯ ಅಂಧರ ಕ್ರಿಕೆಟ್ ತಂಡದ ಉಪನಾಯಕ ಪ್ರಕಾಶ ಜಯರಾಮಯ್ಯ, ವೈ.ಬಿ. ಉದಯಕುಮಾರ, ಪಾಲ್ಗೊಂಡಿದ್ದರು.
ಲಯನ್ಸ್ ಕ್ಲಬ್‌ನ ಮಹೇಂದ್ರ ಸಿಂಘಿ, ಗೌತಮ ಗುಲೆಚ್ಚಾ, ಮಹಾವೀರ ಕುಂದೂರ, ಅಭಯಕುಮಾರ ಸೂಜಿ, ಶ್ರೇಣಿಕ ರಾಜಮಾನೆ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement