ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಭಾರತದಲ್ಲಿ ಉನ್ನತ ಶಿಕ್ಷಣ ವಿಸ್ತರಣೆ

Lingaraj Badiger
Updated On : 22 Apr 2014, 11:38 am

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 21
ಕರ್ನಾಟಕ ವಿಶ್ವವಿದ್ಯಾಲಯದ ಯೋಜನೆ ಮತ್ತು ಅಭಿವೃದ್ಧಿ ವಿಭಾಗವು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಏ. 22 ಮತ್ತು 23ರಂದು 'ಭಾರತದಲ್ಲಿ ಉನ್ನತ ಶಿಕ್ಷಣ ವಿಸ್ತರಣೆ, ಸಮಾನತೆ ಹಾಗೂ ಉತ್ಕೃಷ್ಟತೆಯ ಸವಾಲುಗಳು" ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ್ನ ಆಯೋಜಿಸಿದೆ.
ಸಂಕಿರಣದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಆಡಳಿತಗಾರರು, ಅಧಿಕಾರಿಗಳು ಹಾಗೂ ಹಿರಿಯ ಪ್ರಾಧ್ಯಾಪಕರು, ಸಂಶೋಧಕರು ಪಾಲ್ಗೊಳ್ಳಲಿದ್ದು, ಕವಿವಿ ಕುಲಪತಿ ಪ್ರೊ. ಎಚ್. ಬಿ. ವಾಲೀಕಾರ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
ಏ. 22ರ ಬೆಳಗ್ಗೆ 10ಕ್ಕೆ ಕವಿವಿ ಮಾನಸೋಲ್ಲಾಸ ಸಭಾಭವನದಲ್ಲಿ ವಿಚಾರ ಸಂಕಿರಣವನ್ನ್ನು ಕುಲಪತಿ ಪ್ರೊ. ಎಚ್. ಬಿ. ವಾಲೀಕಾರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಮಾಜಿ ಸದಸ್ಯ ಹಾಗೂ ವಿಶ್ರಾಂತ ಕುಲಪತಿ ಪ್ರೊ. ಎಂ. ಐ. ಸವದತ್ತಿ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ಜರುಗುವ 'ಉನ್ನ್ನತ ಶಿಕ್ಷಣದಲ್ಲಿ ಸಮಾನತೆ ಮತ್ತು ಉದ್ಯೋಗಶೀಲತೆ' ಕುರಿತ ಗೋಷ್ಠಿಯಲ್ಲಿ ತುಮಕೂರು ಶ್ರೀ ಸಿದ್ಧಗಂಗಾ ತಂತ್ರಜ್ಞಾನ ಸಂಸ್ಥೆಯ ಪ್ರೊ. ಎಂ. ಆರ್. ಸೊಲ್ಲಾಪುರ, ಉನ್ನ್ನತ ಶಿಕ್ಷಣ ಪರಿಷತ್ತಿನ  ಡಾ. ರಾಜೇಂದ್ರ ಫ್ರಾನ್ಸಿಸ್ ಪ್ರಬಂಧ ಮಂಡಿಸಲಿದ್ದಾರೆ.
ಸಂಜೆ 4ಕ್ಕೆ ಜರುಗುವ 'ಸಂಶೋಧನೆ ಹಾಗೂ ಸಂಶೋಧನಾ ಅನುದಾನದ ನಿರ್ವಹಣೆ' ಕುರಿತ ಗೋಷ್ಠಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರೊ. ರಾಜೇಂದ್ರ ಪೋದ್ದಾರ, ಕವಿವಿ ಪ್ರೊ. ಜೆ. ಆರ್. ಟೋನಣ್ಣವರ ವಿಷಯ ಮಂಡಿಸಲಿದ್ದಾರೆ.
ಏ. 23ರಂದು ಬೆಳಗ್ಗೆ 10.00 ಗಂಟೆಗೆ ಜರುಗುವ 'ಭಾರತದ ಉನ್ನತ ಶಿಕ್ಷಣದಲ್ಲಿ ಲಭ್ಯತೆ ಮತ್ತು ಸಮಾನತೆ' ಕುರಿತ ಗೋಷ್ಠಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರೊ. ಚಂದ್ರ ಪೂಜಾರಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಪ್ರೊ. ಮುಜಾಫರ ಆಸಾದಿ ಮಾತನಾಡಲಿದ್ದಾರೆ.
ಮಧ್ಯಾಹ್ನ 12ಕ್ಕೆ 'ಉತ್ಕೃಷ್ಟತೆಯನ್ನ್ನು ಸಾಕಾರಗೊಳಿಸುವ ಬಗೆಗಳು' ಕುರಿತಾದ ಗೋಷ್ಠಿಯಲ್ಲಿ ಕವಿವಿ ಹಿರಿಯ ಪ್ರಾಧ್ಯಾಪಕ ಪ್ರೊ. ಎಸ್. ಎಸ್. ಪಟಗುಂದಿ, ಪ್ರೊ. ಬಿ. ಎಂ. ಸ್ವಾಮಿ ವಿಷಯ ಮಂಡಿಸಲಿದ್ದಾರೆ.
ಸಂಜೆ ಜರುಗುವ ಸಮಾರೋಪ ಸಮಾರಂಭದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಜಿ. ಮೂಲಿಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಮಾರೋಪ ಭಾಷಣ ನೀಡಲಿದ್ದು ನಂತರ ಯುಸಿಎಫ್‌ನ ಸರಿನಾ ಪರಾಂಜಪೆಯವರು ಭಾರತದ ವಿದ್ವಾಂಸರುಗಳಿಗೆ ಹಾಗೂ ಸಂಶೋಧಕರಿಗೆ ಫುಲ್ಬ್ರೈಟ್ ಅವಕಾಶಗಳ ಕುರಿತು ವಿಷಯ ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನ್ನು ಕುಲಪತಿ ಪ್ರೊ. ಎಚ್. ಬಿ. ವಾಲೀಕಾರ ವಹಿಸಲಿದ್ದಾರೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಅಭಿವೃದ್ಧಿ ಅಧಿಕಾರಿ ಪ್ರೊ. ಎಸ್. ಟಿ. ಬಾಗಲಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement