ವಿಶ್ವ ಭೂಮಿ ದಿನಾಚರಣೆ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 22
ಇಲ್ಲಿನ ಪರಿಸರ ಭವನದಲ್ಲಿ ಮಂಗಳವಾರ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಧಾರವಾಡ ಪ್ರಾದೇಶಿಕ ಕಚೇರಿ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ಧಾರವಾಡ ಹಾಗೂ ಕಿಡ್ಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪರಿಸರ ಅಧಿಕಾರಿ ವಿಜಯಕುಮಾರ್ ಕಡಕಭಾವಿ ಮಾತನಾಡಿ, ವಿಶ್ವ ಭೂಮಿ ದಿನಾಚರಣೆಯ ಮಹತ್ವವ್ನ ಸವಿವರವಾಗಿ ತಿಳಿಸಿದರಲ್ಲದೆ, ಅದರ ರಕ್ಷಣೆಯ ಬಗ್ಗೆ ತಿಳಿವಳಿಕ್ನೆ ನೀಡಿದರು.
ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಡಾ. ಜಗದೀಶ ಗುಡಗೂರ, ಭೂಮಿ ಉದಯಿಸಿದ ಬಗ್ಗೆ ವಿವರಿಸಿದರು. ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ಜೆ.ಎನ್.ಯೊಗಾನಂದ, ಪರಿಸರವಾದಿಗಳಾದ ಬಾಳಪ್ಪ ಶಿಗಿಹಳ್ಳಿ, ಪ್ರಕಾಶ ಗೌಡರ್, ಪಂಡಿತ ಮುಂಜಿ, ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಹಾಜರಿದ್ದರು.