ಶ್ರೇಷ್ಠ ಕೃಷಿಕ, ಕೃಷಿಕ ಮಹಿಳೆ ಪ್ರಶಸ್ತಿ: ಆಹ್ವಾನ
ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ರೈತರನ್ನ್ನು ಗುರುತಿಸಿ ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಹಾಗೂ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆಯರ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ. ಮೇ 25 ಅರ್ಜಿ ಸ್ವೀಕೃತಿಯ ಕೊನೆ ದಿನ. ಈ ಹಿನ್ನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಸಾಧಕರು ನಿಗದಿತ ಅರ್ಜಿ ನಮೂನೆಯನ್ನು ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ ಅಥವಾ ವಿಸ್ತರಣಾ ಮುಂದಾಳು, ವಿಸ್ತರಣಾ ಶಿಕ್ಷಣ ಘಟಕ ಧಾರವಾಡ ಈ ಕಚೇರಿಗಳಿಂದ ಏ. 30ರೊಳಗಾಗಿ ಪಡೆದು, ಭರ್ತಿ ಮಾಡಿ,್ನ ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ಶಿಫಾರಸಿನೊಂದಿಗೆ ಕೃಷಿ ವಿಜ್ಞಾನ ಕೇಂದ್ರಕ್ಕೆ (ಸೈದಾಪುರ ಫಾರಂ, ಧಾರವಾಡ) - ಇಲ್ಲಿಗೆ ಮೇ 25 ರೊಳಗೆ ಸಲ್ಲಿಸಬೇಕು. ಮಾಹಿತಿಗೆ ದೂ. 0836-2444272 / 2446470, ಮೊ. 9448495342 ಅಥವಾ 9448495348 ಸಂಪರ್ಕಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಎಸ್.ಎಂ. ಮಂಟೂರ ಕೋರಿದ್ದಾರೆ.
ಸಡಗರದ ಕರೆಯಮ್ಮದೇವಿ ರಥೋತ್ಸವ
ಧಾರವಾಡ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ತಾಲೂಕಿನ ಮನಸೂರ ಗ್ರಾಮದಲ್ಲಿ ಮಂಗಳವಾರ ಕರಿಯಮ್ಮ ದೇವಿ ಜಾತ್ರೆಯು ವಿಜೃಂಭಣೆಯಿಂದ ಜರುಗಿತು. ಪ್ರತಿ 30 ವರ್ಷಕ್ಕೊಮ್ಮೆ ಗ್ರಾಮದಲ್ಲಿ ಕರಿಯಮ್ಮ ದೇವಿಯ ಜಾತ್ರೆ ಸಡಗರ-ಸಂಭ್ರಮದಿಂದ ನಡೆಯುತ್ತದ್ದು ಇದು ಜಾತ್ರೆಯ ವಿಶೇಷ. ಮತ್ತೊಂದು ವಿಶೇಷತೆಯಂದರೆ, ಪ್ರತಿ ಮೂವತ್ತ ವರ್ಷಕ್ಕೊಮ್ಮೆ ಹೊಸ ತೇರನ್ನು ಸಿದ್ಧಗೊಳಿಸಿಯೇ ಈ ಜಾತ್ರೆಯನ್ನು ನೆರವೇರಿಸಲಾಗುತ್ತದೆ. ಜಾತ್ರೆ ಸಂದರ್ಭದಲ್ಲಿ ಊರಿನ ಜನತೆ ಅರಿಶಿಣದ ಓಕುಳಿ ಆಡುತ್ತಾರೆ. ಪ್ರತಿ ವರ್ಷ ಮಳೆ, ಬೆಳೆ ಚೆನ್ನಾಗಿ ಆಗಲಿ ಎಂಬ ಕಾರಣದಿಂದ ಪ್ರತಿ 30 ವರ್ಷಗಳಿಗೊಮ್ಮೆ ಜಾತ್ರೆ ಮಾಡುವ ಸಂಪ್ರದಾಯ ರೂಢಿಸಿಕೊಂಡು ಬಂದಿದೆ. ಸಹಸ್ರಾರು ಭಕ್ತರ ಹಷೋದ್ಘಾರಗಳ ಮಧ್ಯೆ ಕರಿಯಮ್ಮ ದೇವಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಇನ್ನೂ ಮುಂದಿನ 11 ದಿನಗಳ ಕಾಲ ಈ ಗ್ರಾಮದಲ್ಲಿ ಜಾತ್ರೆ ನಡೆಯಲಿದೆ. ಬೆಳಗ್ಗೆಯಿಂದಲೇ ಗ್ರಾಮದ ಜನತೆ ವಿಶೇಷ ಅಡುಗೆ ಮಾಡಿ ಶ್ರೀದೇವಿಗೆ ನೈವೇದ್ಯ ಅರ್ಪಿಸಿದರು. ಸಂಜೆಯವರೆಗೂ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಂಜೆ 5ರ ಹೊತ್ತಿಗೆ ರಥೋತ್ಸವ ಆರಂಭಗೊಳ್ಳುತ್ತಿದಂತೆಯೇ ಭಕ್ತರು ಬಾಳೆಹಣ್ಣು, ಉತ್ತತ್ತಿಗಳನ್ನು ತೂರಿ ನಮನ ಸಲ್ಲಿಸಿದರು. ಧಾರವಾಡ, ಮಂಡಿಹಾಳ, ಮನಗುಂಡಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.