ತರಬೇತಿ: ಅರ್ಜಿ ಆಹ್ವಾನ
ಧಾರವಾಡ: ಮೈಸೂರಿನ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹೆಲನ್ ಕೆಲ್ಲರ್ ಅಂಧ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಎರಡು ವರ್ಷಗಳ ಅಂಧ ಮಕ್ಕಳ ವಿಶೇಷ ಶಿಕ್ಷಣ ಡಿ.ಎಸ್.ಎಸ್.ಇ (ವಿಐ) ಕೋರ್ಸ್ ಹಾಗೂ ಶ್ರವಣ ದೋಷವುಳ್ಳ ಮಕ್ಕಳ ವಿಶೇಷ ಶಿಕ್ಷಣ ಡಿಎಡ್ಎಸ್ಇ (ಎಚ್ ಐ) ತರಬೇತಿ ಕೋರ್ಸ್ಗಳನ್ನು ನಡೆಸಲಾಗುತ್ತಿದೆ. ಮೇ 5ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಯೊಂದಿಗೆ ಮೇ 21ರೊಳಗೆ ಉಪನಿರ್ದೇಶಕರು (ತರಬೇತಿ), ಅಂಧ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ಪುಲಕೇಶಿ ರಸ್ತೆ, ತಿಲಕ ನಗರ, ಮೈಸೂರು (ದೂ. 0820-2490600) ಗೆ ಸಲ್ಲಿಸಬೇಕು. ಮಾಹಿತಿಗೆ ಧಾರವಾಡ ಜಿಲ್ಲಾ ವೆಬ್ ಸೈಟ್ (ಢಿಢಿಢಿ.ಟಣಡ್ಟ್ಠಜ.ಟ್ಝ್ಛಿ.್ಝಟಿ) ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.