ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಿರ್ಮೂಲನೆಯಾಗದ ಬಾಲಕಾರ್ಮಿಕ ಪದ್ಧತಿ

Rashmi Kasaragodu
Updated On : 28 Apr 2014, 12:18 pm

ರವಿ ಬಡಿಗೇರ
ಕನ್ನಡಪ್ರಭ ವಾರ್ತೆ, ಕಲಘಟಗಿ, ಏ. 27
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಕಾಯ್ದೆಗೆ ಹಳ್ಳಿಗಳಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
ತಾಲೂಕಿನಾದ್ಯಂತ ಸುಮಾರು 3000 ಕ್ಕೂ ಹೆಚ್ಚು ಬಾಲ ಕಾರ್ಮಿಕರು ತಮ್ಮ ಹಾಗೂ ಕುಟುಂಬದ ಬದುಕಿನ ಬಂಡ್ನಿ ಸಾಗಿಸಲು ಪ್ರಾಣ ಪಣಕ್ಕಿಟ್ಟು ಹಗಲಿರುಳು ಕಾರ್ಯನಿರತರಾಗಿದ್ದಾರೆ. ಆದರೆ ಅದರತ್ತ ಸಂಬಂಧಿಸಿದ ಇಲಾಖೆಗಳಾಗಲಿ, ಸ್ಥಳೀಯ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದಾಗಿ ಬಾಲ ಕಾರ್ಮಿಕರ ಬವಣೆ ಕೇಳುವವರಿಲ್ಲದಂತಾಗದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣ ಗ್ರಾಮೀಣ ಪ್ರದೇಶಗಳಲ್ಲಿ ಹೊಂದಿಕೊಂಡಿರುವ ರಾಜ್ಯ, ಜಿಲ್ಲಾ ಕೇಂದ್ರವನ್ನ್ನು ಸಂಪರ್ಕಿಸುವ ಹೆದ್ದಾರಿಗಳು, ಅರಣ್ಯ ಪ್ರದೇಶವನ್ನ್ನು ಹೊಂದಿಕೊಂಡಿರುವ ಗ್ರಾಮಗಳು, ಧಾರವಾಡ ಜಿಲ್ಲೆಯಲ್ಲಿಯೇ ಹೆಚ್ಚು.
ಬಾಲಕರೇ...: 10 ಲಂಬಾಣಿ ತಾಂಡಾಗಳು, ಸುಮಾರು 200ಕ್ಕೂ ಹೆಚ್ಚು ಇಟ್ಟಿಗೆ ಫ್ಯಾಕ್ಟರಿಗಳಿಗೆ ಬೇಕಾಗಿರುವ ಸಂಪನ್ಮೂಲ, ಸಣ್ಣ, ಮಧ್ಯಮ ವರ್ಗದ ಕೈಗಾರಿಕಾ ವಸಾಹತುಗಳು, ಹೋಟೆಲ್, ಅಂಗಡಿ ಮುಂಗಟ್ಟುಗಳು, ಗ್ಯಾರೇಜ್, ಗ್ರಾಪಂನ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಸೇರಿದಂತೆ ಇನ್ನಿತರೆ ವಲಯಗಳಲ್ಲಿ ಬಾಲ ಕಾರ್ಮಿಕರು ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಇದಕ್ಕೆ ವಿವಿಧ ರಾಜಕೀಯ ಪಕ್ಷಗಳ, ಅಧಿಕಾರಗಳ ಕೃಪಾಕಟಾಕ್ಷವೂ ಇದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಕುರಿತಂತೆ ಹಲವಾರು ಬಾರಿ ತಾಪಂ ಸಭೆಯಲ್ಲಿಯೂ ಕಾವೇರಿದ ಚರ್ಚೆ ನಡೆದಿವೆ.
ಅಸಹಾಯಕತೆ: ಈ ಕುರಿತಂತೆ ತಾಲೂಕು ಕೇಂದ್ರದಲ್ಲಿರುವ ಕಾರ್ಮಿಕ ನಿರೀಕ್ಷಕ ಪಿ.ವಿ.ಮಾವರಕರ್ ಅವರನ್ನ್ನು ಪತ್ರಿಕೆ ಸಂಪರ್ಕಿಸಿದಾಗ, ನಮ್ಮ ಇಲಾಖೆಯ ಸೇವಾ ಸೌಲಭ್ಯಗಳ ಕುರಿತು ಮಾಹಿತ್ನಿ ನೀಡುತ್ತಿದ್ದರೂ ಯಾರೂ ಸಹಕಾರ ನೀಡುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ 830 ಫಲಾನುಭವಿಗಳ ಹೆಸರನ್ನು ನೊಂದಾಯಿಸಿದ್ದು, ಇದಕ್ಕೆ ಹೆಚ್ಚಿನ ಜನರು ಸಹಾಯ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಬಾಲ ಕಾರ್ಮಿಕರ ನಿರ್ಮೂಲನೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ದೂರ್ನು ನೀಡಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳು ಹೊರತಲ್ಲ. ಪ್ರತಿಯೊಬ್ಬರೂ ಇದಕ್ಕೆ ಸಹಕಾರ ನೀಡಿದಾಗ ಮಾತ್ರ ಬಾಲ ಕಾರ್ಮಿಕರ ಜಾಗೃತಿ ಆಂದೋಲನವನ್ನ್ನು ಯಶಸ್ವಿಗೊಳಿಸಲು ಸಾಧ್ಯ ಎಂದರು.
ಹೆಚ್ಚಳ: ಬಾಲಕಾರ್ಮಿಕ ಪದ್ಧತ್ನಿ ತೊಡೆದು ಹಾಕಲು, ಜನಜಾಗೃತಿ ಮೂಡಿಸಲು ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಮಿಕ ಇಲಾಖೆ, ಪೊಲೀಸ್, ಶಿಕ್ಷಣ ಇಲಾಖೆ, ಶಿಶು ಅಭಿವೃದ್ದಿ ಇಲಾಖೆ, ಆರೋಗ್ಯ ಮುಂ ತಾದ ಇಲಾಖೆಗಳು ಕಾರ್ಯನಿರ್ವಹಿಸಬೇಕೆಂದಿದ್ದರೂ ಸಮರ್ಪಕವಾಗಿ ಪರಿಪಾಲನೆ ಮಾಡದಿರುವುದರಿಂದಾಗಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement