ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಿವಾನುಭವ ತರಬೇತಿ

Rashmi Kasaragodu
Updated On : 28 Apr 2014, 12:24 pm

ಧಾರವಾಡ: ಅಖಿಲ ಭಾರತ ಶಿವಾನುಭವ ಸಂಸ್ಥೆಯು ಮುರುಘಾಮಠದ ಆಶ್ರಯದಲ್ಲಿ ಏಳು ದಿನಗಳ ಕಾಲ ಶಿವಾನುಭವ ತರಬೇತಿ ಶಿಬಿರವನ್ನು ಮೇ 8 ರಿಂದ 24 ರವರೆಗೆ ಹಮ್ಮಿಕೊಂಡಿದೆ.
ಶಿಬಿರದಲ್ಲಿ ಪ್ರಾರ್ಥನೆ, ಯೋಗ, ಶಿವಯೋಗ ಹಾಗೂ ಶರಣ ತತ್ವ, ಸಾಹಿತ್ಯ, ಸಂಸ್ಕೃತಿಗಳ ಕುರಿತಾದ ಬೋಧನೆ ಹಾಗೂ ಚಿಂತನೆಗಳನ್ನು ನಡೆಸಲಾಗುತ್ತದೆ. ನಾಡಿನ ಶಿವಾನುಭವಗಳು, ಶರಣ ತತ್ವಚಿಂತಕರು, ಶರಣ ಸಾಹಿತಿಗಳಿಂದ ಶಿಬಿರಾರ್ಥಿಗಳಿಗೆ ಪಾಠ ನಡೆಯಲಿದೆ.
ಈ ಶಿಬಿರದಲ್ಲಿ ಶಿಕ್ಷಕರು ಶರಣಧರ್ಮ ಅನುಯಾಯಿಗಳು ಹಾಗೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಬಹುದು.
ಶಿಬಿರಾರ್ಥಿಗಳಿಗೆ ಶ್ರೀಮುರುಘಾಮಠದಲ್ಲಿ ಪಾಠ ಪ್ರವಚನದ ಹಾಗೂ ವಸತಿ, ಪ್ರಸಾದ ವ್ಯವಸ್ಥೆ ಉಚಿತವಾಗಿದ್ದು ಆಸಕ್ತರು ಮೇ 2 ರೊಳಗಾಗಿ ಹೆಸರು ನೋಂದಾಯಿಬಹುದು.
ಮಾಹಿತಿಗೆ ಮೊ. 99868 93602 ಸಂಪರ್ಕಿಸುವಂತೆ ಶಿಬಿರದ ಸಂಚಾಲಕ ಡಾ.ಶಂಭುಲಿಂಗ ಹೆಗಡಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇಂದು ಬಿಜೆಪಿ ಪ್ರತಿಭಟನೆ
ಧಾರವಾಡ: ಚಿಕ್ಕಮಗಳೂರು ಜಿಲ್ಲೆಯ ತನಿಕೋಡು ಸಮೀಪ  ನಡೆದ ಎನ್ಕೌಂಟರ್ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಲು ಹಾಗೂ ಸರ್ಕಾರ ಘೋಷಿಸಿರುವ ಪರಿಹಾರದ ಮೊತ್ತವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಏ. 28ರಂದು ಬಿಜೆಪಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಲಿದೆ. ಬೆಳಗ್ಗೆ 10.30ಕ್ಕೆ ನಗರದ ಕಡಪಾ ಮೈದಾನದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಗ್ರಾಮೀಣ ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ ಭಾಗವಹಿಸಲಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.
ನಾಳೆ ವಾರ್ಷಿಕ ಸಮಾರೋಪ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿ ಕೂಟದ ಸಮಾರೋಪ ಸಮಾರಂಭ ಏ. 29ರ ಮಧ್ಯಾಹ್ನ 2ಕ್ಕೆ ಸುವರ್ಣ ಮಹೋತ್ಸವ ಸಭಾ ಭವನದಲ್ಲಿ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಪಾಲ್ಗೊಳ್ಳಲಿದ್ದಾರೆ. ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮಕ್ಕೆ ಮುನ್ನ ಸ್ನಾತಕೋತ್ತರ ವಲಯ, ದಕ್ಷಿಣ ಭಾರತ ವಲಯ ಹಾಗೂ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪ್ರಶಸ್ತಿ ಪಡೆದ ವಿವಿಧ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಚಿಕಿತ್ಸೆ ಫಲಿಸದೇ ಮಹಿಳೆ ಸಾವು
ಹುಬ್ಬಳ್ಳಿ: ಪತಿಯಿಂದ ಹಲ್ಲೆಗೆ ಒಳಗಾಗಿ ಇಲ್ಲಿನ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.ಹಳೇ ಹುಬ್ಬಳ್ಳಿ ಹೆಗ್ಗೇರಿ ಪ್ರದೇಶದ ಜಗದೀಶ ನಗರದ ಸರೀತಾ ಶಿವಾನಂದ ವಜ್ಜನ್ನವರ ಮೃತಪಟ್ಟ ಮಹಿಳೆ. ಕೆಲವು ದಿನಗಳ ಪತ್ನಿಯನ್ನು ಸಂಶಯದೃಷ್ಟಿಯಿಂದ ನೋಡುತ್ತಿದ್ದ ಶಿವಾನಂದ ವಜ್ಜನ್ನವರ, ತನ್ನ ಪತ್ನಿ ಸರೀತಾ ಮೇಲೆ ಸಲಾಕೆಯಿಂದ ತಲೆ ಮತ್ತು ಮುಖದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ, ಹಲ್ಲೆಗೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸರೀತಾ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಅಣ್ಣಿಗೇರಿ: ಸಮೀಪದ ಶಿಶ್ವಿನಹಳ್ಳಿ ಗ್ರಾಮದ ಬಸಪ್ಪ ಯಲ್ಲಪ್ಪ ಕಿಲಬನೂರ (55) ನಾಪತ್ತೆಯಾಗಿದ್ದಾರೆ. ಮೂಲತಃ ರಾಮದುರ್ಗ ತಾಲೂಕಿನವರಾದ ಇವರು, ಶಿಶ್ವಿನಹಳ್ಳಿಯ ಕಸ್ತೂರಿ ಎಂಬುವರನ್ನು  ವಿವಾಹವಾಗಿದ್ದರು. ಮೊದಲಿನಿಂದಲೂ ಮಾನಸಿಕವಾಗಿ ಅಸ್ವಸ್ಥರಾಗಿದ್ದ ಇವರು ಆಗಾಗ ಮನೆ ಬಿಟ್ಟು ಹೋಗಿದ್ದಾರೆ. ನಾಪತ್ತೆಯಾಗಿರುವ ಬಸಪ್ಪ   5 ಅಡಿ ಎತ್ತರವಿದ್ದು, ತೆಳ್ಳನೆಯ ಮೈಕಟ್ಟು, ಸಾದುಗಪ್ಪು ಮೈ ಬಣ್ಣ, ಉದ್ದ ಮುಖವಿದ್ದು, ಕನ್ನಡ ಮಾತನಾಡುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement