ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮೇ 7ರಿಂದ ವೈಜ್ಞಾನಿಕ ಕಥಾ ಶಿಬಿರ

Lingaraj Badiger
Updated On : 29 Apr 2014, 12:21 pm

ಹುಬ್ಬಳ್ಳಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ಮೇ 7,8 ಮತ್ತು 9ರಂದು ವೈಜ್ಞಾನಿಕ ಕಥಾ ಲೇಖನ ಶಿಬಿರವನ್ನು ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಮ್ಮಿಕೊಳ್ಳಲಾಗಿದೆ. ವೈಜ್ಞಾನಿಕ ಕಥಾ ಲೇಖನದ ಶಿಬಿರದ ನಿರ್ದೇಶಕರಾಗಿ ರಾಜಶೇಖರ ಭೂಸನೂರಮಠ ಮತ್ತು ಸಹ ನಿರ್ದೇಶಕರಾಗಿ ಡಾ. ಎಚ್. ಶ್ರೀನರಹರಿ ಕಾರ್ಯನಿರ್ವಹಿಸಲಿದ್ದಾರೆ.
3 ದಿನ ನಡೆಯುವ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಊಟ ಮತ್ತು ಚಹಾ ವ್ಯವಸ್ಥೆ ಮಾಡಲಾಗಿದೆ. ಈ ಶಿಬಿರದಲ್ಲಿ ಪಾಲ್ಗೊಂಡವರು ಬರೆಯುವ ವೈಜ್ಞಾನಿಕ ಹಿನ್ನೆಲೆಯ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶವಿದ್ದು, ಶಿಬಿರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ. 40 ಜನರಿಗೆ ಮಾತ್ರ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಇದೆ. ಏ.30ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕ ಧಾರವಾಡ, ಚಂದ್ರಕಾಂತ ಚಂಡೂರ 7204632606, ಪ್ರಸನ್ನ ಜೋಶಿ 9900972384 ಇವರನ್ನು ಸಂಪರ್ಕಿಸಬಹುದು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement