ದೌರ್ಜನ್ಯ: ವೈದ್ಯಾಧಿಕಾರಿ ಅಮಾನತಿಗೆ ಆಗ್ರಹ
ಕುಂದಗೋಳ: ತಾಲೂಕಿನ ಕಳಸ ಉಪಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಆರ್.ವಿ. ಕಾಡರಕೊಪ್ಪ ಅಮಾನತು ಮಾಡಬೇಕೆಂದು ಕೇಂದ್ರದ ಆರೋಗ್ಯ ಸಹಾಯಕಿ ಪಾರ್ವತಿ ನಾಯ್ಕ ಜಿಲ್ಲಾ ವೈದ್ಯಾಧಿಕಾರಿ ಡಾ. ಎನ್.ಎಂ. ಅಂಗಡಿಗೆ ದೂರು ನೀಡಿದ್ದಾರೆ. ರಾಜ್ಯ ಹಿರಿಯ, ಕಿರಿಯ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದ್ದು, ಅಂಗಡಿಆರೋಗ್ಯ ಕೇಂದ್ರಕ್ಕೆ ಹೋಗಿ ಶುಕ್ರವಾರ ಪರಿಶೀಲನೆ ಸಭೆ ನಡೆಸಿದರು. ಕೆಲಸದ ವಿಷಯವಾಗಿ ಸುಮ್ಮನೆ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆಂದು ಪಾರ್ವತಿ ಡಾ. ಕಾಡರಕೊಪ್ಪ ವಿರುದ್ಧ ಆರೋಪಿಸಿದರು. ಈ ಕುರಿತು ಪರಿಶೀಲಿಸಿ ಅಧಿಕಾರಿ ವರ್ಗ ಮಾಡಲು ಕ್ರಮ ಕೈಗೊಳ್ಳುವೆ ಎಂದು ಡಾ. ಅಂಗಡಿ ಹೇಳಿದರು. ಡಾ. ಕಾಡರಕೊಪ್ಪ, ವಿ.ಎಲ್. ಜಂಗಮಗೌಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಂಗಡಿ ಪರಿಸ್ಥಿತಿ ತಿಳಿಗೊಳಿಸಿದರು.