ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅತಂತ್ರ ಸ್ಥಿತಿಗೆ ಮಕ್ಕಳ ಕಲಿಕಾಸಕ್ತಿ ಬಲಿ: ಪ್ರಕಾಶ

Rashmi Kasaragodu
Updated On : 11 Feb 2014, 11:24 am

ಧಾರವಾಡ: ಡೋಲಾಯಮಾನ ಸ್ಥಿತಿಯಲ್ಲಿರುವ ಶಿಕ್ಷಣ ಸ್ಥಿತಿಯಿಂದಾಗಿ ವಿದ್ಯಾರ್ಥಿಗಳ ಕಲಿಕಾಸಕ್ತಿ ಕುಂಠಿತಗೊಳ್ಳುತ್ತಿದೆ ಎಂದು ವಿದ್ಯಾವರ್ಧಕ ಸಂಘದ ಸದಸ್ಯ ಪ್ರಕಾಶ ಉಡಿಕೇರಿ ಹೇಳಿದರು. ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಹುಬ್ಬಳ್ಳಿ-ಧಾರವಾಡ ಮಹಾನಗರ ಆಯೋಜಿಸಿದ್ದ ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಕುರಿತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣದಿಂದ ಸಮಾಜದಲ್ಲಿ ಎರಡು ಭಿನ್ನ ಜನರು ಸೃಷ್ಟಿಯಾಗುತ್ತಿದ್ದಾರೆ. ಶಿಕ್ಷಣ ರಂಗ ಗುರು ಭಕ್ತಿಯ ತಳಹದಿಯ ಮೇಲೆ ನಿಂತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಗುರು ಭಕ್ತಿ, ದೇಶ ಭಕ್ತಿಗಿಂತ ಸ್ವಭಕ್ತಿ ಕಲಿಯುವಂತಾಗಿದೆ ಎಂದರು. ಇದರಿಂದಾಗಿ ದೇಶ ತನ್ನ ಮೂಲ ಸಂಸ್ಕೃತಿಗೆ ಧಕ್ಕೆ ತಂದುಕೊಳ್ಳುವುದು ಶತಃಸಿದ್ಧ ಎಂದು ವಿಷಾದಿಸಿದರು.  ಎಸ್ಎಫ್ಐ ರಾಜ್ಯಕಾರ್ಯದರ್ಶಿ ಹುಳ್ಳಿ ಉಮೇಶ, ದೇಶದ ಉನ್ನತ ಶಿಕ್ಷಣದ ಗುಣಮಟ್ಟ ಕುಸಿದಿದೆ. ಇಡೀ ಜಗತ್ತಿನಲ್ಲಿಯೇ ಜ್ಞಾನವಂತರನ್ನು ಹೊಂದಿದ ನಮ್ಮ ನಾಡು ಇಂದು ಶೈಕ್ಷಣಿಕವಾಗಿ ಹಿಂದುಳಿದ ನಾಡು ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.  ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಬಸವರಾಜ ಪೂಜಾರ, ಮಹೇಶ ಪತ್ತಾರ, ಮಾರುತಿ ಅಂಬಗೇರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement