ಅವಿರೋಧ ಆಯ್ಕೆ
ಹುಬ್ಬಳ್ಳಿ: ಗುರುಸಿದ್ದೇಶ್ವರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಶಂಕರಣ್ಣ ಮುನವಳ್ಳಿ ಗುಂಪಿನ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿಗೆ ಹಿಂದುಳಿದ ವರ್ಗಕ್ಕೆ ಮೀಸಲಿರಿಸಿದ ಸ್ಥಾನದಿಂದ ತಿಪ್ಪಣ್ಣ ಮಜ್ಜಗಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಿಂದ ಮಾರುತಿ ಜಾಧವ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ್ ಚುನಾವಣಾ ಅಧಿಕಾರಿ ಡಾ. ಸುನೀತಾ ಸಿದ್ರಾಮ ಅವಿರೋಧವಾಗಿ ಆಯ್ಕೆಯಾದ ಇಬ್ಬರಿಗೂ ಪ್ರಮಾಣ ಪತ್ರ ನೀಡಿದ್ದಾರೆ.
ಹುಬ್ಬಳ್ಳಿ: 13ರಂದುತುಳಜಾಭವಾನಿ ಜಾತ್ರೆ
ಧಾರವಾಡ: ಹೆಬ್ಬಳ್ಳಿ ಅಗಸಿಯಲ್ಲಿನ ತುಳಜಾಭವಾನಿ ದೇವಿಯ ನಾಲ್ಕನೇ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 13 ಮತ್ತು 14ರಂದು ನಡೆಯಲಿದೆ. 13ರಂದು ಬೆಳಗ್ಗೆ 9ಕ್ಕೆ ದೇವಿ ಪಲ್ಲಕ್ಕಿ ಮೆರವಣಿಗೆ ಹೆಬ್ಬಳ್ಳಿ ಅಗಸಿ, ಮಂಗಳವಾರ ಪೇಟೆ, ರವಿವಾರ ಪೇಟೆ ಮಾರ್ಗವಾಗಿ ದೇವಸ್ಥಾನಕ್ಕೆ ಬರಲಿದೆ. ನಂತರ ಸಪ್ತಶತಿ ಪಾರಾಯಣ, ಗಣಹೋಮ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಪೂರ್ಣಾಹುತಿ ನಡೆಯಲಿದೆ. ಸಂಜೆ 5:30ಕ್ಕೆ ಸುನೀಲ ಪತ್ರಿ, ಜ್ಯೂನಿಯರ್ ವಿಷ್ಣುವರ್ಧನ್, ರಾಜಶ್ರೀ ಅವರಿಂದ ರಸಮಂಜರಿ, ಸಂಗೀತ ಹಾಗೂ ತನ್ವಿ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಫೆ. 14ರಂದು ನವಚಂಡಿ ಹೋಮ, ಸತ್ಯನಾರಾಯಣ ಪೂಜೆ, ಪೂರ್ಣಾಹುತಿ ನಡೆಯಲಿದೆ. ಸಂಜೆ 5 ರಿಂದ ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 8ಕ್ಕೆ ದೇವಿ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಫ್ಯಾಶನ್ ಡಿಸೈನ್ ತರಬೇತಿ
ಧಾರವಾಡ: ನಾಗರಿಕ ಮಿತ್ರ ಸಂಸ್ಥೆ ಹಾಗೂ ವಿಕಾಸ ಸಂಸ್ಥೆ ಆಶ್ರಯದಲ್ಲಿ ಫೆ. 18ರಂದು ಫ್ಯಾಶನ್ ಡಿಸೈನ್ ಮತ್ತು ಮೆಹಂದಿ ತರಬೇತಿ ಹಮ್ಮಿಕೊಂಡಿದ್ದು ಆಸಕ್ತರು ನಾಗರಿಕ ಮಿತ್ರ ಸಂಸ್ಥೆ, ಖಾಜಿ ಬಿಲ್ಡಿಂಗ್, ಹುಬ್ಳೀಕರ ಪ್ಲಾಟ್, ಸಾಧನಕೇರಿ ಅಥವಾ 98443 81009 ಸಂಪರ್ಕಿಸಬಹುದು.
ನಾಳೆ ವಾರ್ಷಿಕೋತ್ಸವ
ಧಾರವಾಡ: ಇಲ್ಲಿನ ಮದೀನಾ ಪಿಯು ಕಾಲೇಜಿನಲ್ಲಿ ಫೆ. 12ರಂದು ಬೆಳಗ್ಗೆ 10ಕ್ಕೆ ಕಾಲೇಜಿನ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣೇಶ ಪೂಜಾರ, ಶಶಿಧರ ನರೇಂದ್ರ, ಕೆ.ಎಂ. ದಾಸನಕೊಪ್ಪ, ಎಂ.ವಿ. ಹಡಪದ ಆಗಮಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಕುಲಪತಿಗೆ ಸನ್ಮಾನ
ಧಾರವಾಡ: ಕೃಷಿ ವಿವಿಯ ನೂತನ ಕುಲಪತಿಗಳಾಗಿ ನೇಮಕಗೊಂಡ ಡಾ. ಡಿ.ಪಿ. ಬಿರಾದಾರರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕೆ ಮಹಾಮಂಡಳಿ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ಜಿಲ್ಲಾ ಹಾಫ್ ಕಾಮ್ಸ್ ಅಧ್ಯಕ್ಷ ಪ್ರಭು ಕೇಶಗೊಂಡ, ಪ್ರಕಾಶ ಧರೆಪ್ಪಗೌಡ, ಬಸವರಾಜ ಗುಂಡಗೋವಿ, ಅಣ್ಣಪ್ಪ ಚಿನಗುಡಿ, ಲಿಂಗಾರೆಡ್ಡಿ, ಉಳವಪ್ಪ ದಾಸನೂರ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.