ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಜಾತ್ರಾ ಮಹೋತ್ಸವ

Rashmi Kasaragodu
Updated On : 11 Feb 2014, 11:26 am

ಹುಬ್ಬಳ್ಳಿ: ಗರಗದ ಮಡಿವಾಳ ಶಿವಯೋಗಿಗಳ 133ನೇ ಪುಣ್ಯಾರಾಧನೆ ನಿಮಿತ್ತ ಫೆ. 11ರಿಂದ 18ರ ವರೆಗೆ  ಜಾತ್ರಾ ಮಹೋತ್ಸವ ಜರುಗಲಿದೆ. ಫೆ. 11ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಪೂಜೆ, 13,  14ರ ಸಂಜೆ 7ರಿಂದ 10ರ ವರೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 14, 15ರಂದು ಸಾಮೂಹಿಕ ವಿವಾಹ, ಮುರಗೋಡ ಉಮೇಶ ಶಿವಾಚಾರ್ಯರಿಂದ ಶಿವದೀಕ್ಷೆ, 15, 16ರಂದು ಇಬ್ರಾಹಿಂ ಸುತಾರ ಪ್ರವಚನ, 17ರಂದು ಜಾನಪದ ಸಂಗೀತ, ಆನಂದಕಂದ ಗೆಳೆಯರ ಬಳಗದಿಂದ ನಗೆಹಬ್ಬ, 18ರಂದು ನಿಜಗುಣ ಶಿವಯೋಗಿಗಳ ಸಣ್ಣಾಟ ಪ್ರದರ್ಶನ.



14ರಂದು ಕಾರ್ಯಾಗಾರ
ಹುಬ್ಬಳ್ಳಿ: ಧಾರವಾಡದ ಕೆಎಲ್ಇ ಸೊಸೈಟಿಯ ಮೃತ್ಯುಂಜಯ ಕಾಲೇಜಿನ ಯೂಥ್ ರೆಡ್ ಕ್ರಾಸ್ ಮತ್ತು ಹಿತೈಷಿ ಫೌಂಡೇಷನ್ನಿಂದ ಫೆ. 14ರಂದು ಬೈಕ್ ಸವಾರರಿಗೆ ರಸ್ತೆ ನಿಯಮಗಳು ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಿದೆ. ಕಾರ್ಯಾಗಾರದಲ್ಲಿ ಸಾರಿಗೆ ಅಧಿಕಾರಿಗಳಿಂದ ಉಪನ್ಯಾಸ ನಡೆಯಲಿದ್ದು, ಸಂಜೆ ಸಮಾರೋಪ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement