ನಾಳೆ ಜೇನು ಕೃಷಿ ತರಬೇತಿ
ಧಾರವಾಡ: ತೋಟಗಾರಿಕೆ ಇಲಾಖೆಯಿಂದ ಮೂರು ದಿನಗಳ ಜೇನು ಕೃಷಿ ಉಚಿತ ತರಬೇತಿಯನ್ನು ಫೆ. 13ರಂದು ಬೆಳಗ್ಗೆ 11ಕ್ಕೆ ಕಲಘಟಗಿ ರಸ್ತೆಯ ಕಣವಿ ಹೊನ್ನಾಪುರ ತೋಟಗಾರಿಕೆ ಕ್ಷೇತ್ರದ ಫಾರ್ಮ್ ಆವರಣದಲ್ಲಿ ಏರ್ಪಡಿಸಲಾಗಿದೆ. ಆಸಕ್ತರು ಯುವಕರು ತರಬೇತಿ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂ. 0836- 2744376 ಸಂಪರ್ಕಿಸಬಹುದು.