ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆ ಬಿಜೆಪಿ ಪೂರ್ವ ಸಿದ್ಧತಾ ಸಭೆ

Mainashree
Updated On : 12 Feb 2014, 1:42 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 11
ಫೆ. 28ರಂದು ನಡೆಯಲಿರುವ 'ಭಾರತ ಗೆಲ್ಲಿಸಿ ರ್ಯಾಲಿ' ಅಂಗವಾಗಿ ಫೆ. 13ರಂದು ಸಂಜೆ 4ಕ್ಕೆ ಗೋಕುಲ ರಸ್ತೆಯ ಚವ್ಹಾಣ ಗ್ರೀನ್ ಗಾರ್ಡನ್ನಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ಕಾರ್ಯಕರ್ತರ ಮಿಲನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯ ಘಟಕದ ಸಹ ವಕ್ತಾರ ಸಿ.ಎಂ. ನಿಂಬಣ್ಣವರ, ರ್ಯಾಲಿಯ ಪೂರ್ವ ಸಿದ್ಧತೆಗಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ, ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಸಿ.ಟಿ. ರವಿ ಆಗಮಿಸಿ ರ್ಯಾಲಿ ಯಶಸ್ವಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಲಿದ್ದಾರೆ.
ಫೆ. 13ರ ಬೆಳಗ್ಗೆ ಹಾವೇರಿಯಲ್ಲಿಯೂ ಏರ್ಪಡಿಸಲಾಗಿರುವ ಕಾರ್ಯಕ್ರಮದಲ್ಲಿ ಬಿಎಸ್ವೈ, ಶೆಟ್ಟರ್, ಅನಂತಕುಮಾರ, ಪ್ರಹ್ಲಾದ ಜೋಶಿ ಪಾಲ್ಗೊಂಡು ಸಂಜೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ತಾಲೂಕು ಹಿರಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ನೇರ ಸಂವಾದ: ದೇಶವ್ಯಾಪಿ ಫೆ. 12ರಂದು ಹಮ್ಮಿಕೊಳ್ಳಲಾಗಿರುವ 'ಚಾಯ್ ಪೇ ಚರ್ಚಾ ಕಾರ್ಯಕ್ರಮದ ಒಂದು ಭಾಗವಾಗಿ ಹುಬ್ಬಳ್ಳಿ ಕೊಪ್ಪಿಕರ ರಸ್ತೆಯ ಸ್ವದೇಶಿ ಖಾನಾವಳಿ ಹಾಗೂ ಯಲ್ಲೋರಾ ಹೊಟೇಲ್ನಲ್ಲಿ ಸಂಜೆ 5ಕ್ಕೆ ಮೋದಿ ಅವರೊಂದಿಗೆ ಮಾತನಾಡಲು ಬಯಸುವವರಿಗೆ ನೇರ ಸಂವಾದ ವ್ಯವಸ್ಥೆ ಕಲ್ಪಿಸಲಾಗುವುದು.
ಇದೇ ರೀತಿಯಾಗಿ ಧಾರವಾಡದ ಯಶವಂತ ಹೊಟೇಲ್ ಹಾಗೂ ಅರುಣ ಟೀ ಸ್ಟಾಲ್ನಲ್ಲಿಯೂ ವ್ಯವಸ್ಥೆ ಮಾಡಲಾಗಿದೆ. ಫೆ. 13ರಂದು ರ್ಯಾಲಿಯ ಅಂಗವಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮವೂ ನಡೆಯಲಿದೆ. ಕುಸುಗಲ್ ರಸ್ತೆಯ 40 ಎಕರೆ ವಿಶಾಲ ಮೈದಾನದಲ್ಲಿ ಫೆ. 28ರಂದು ನಡೆಯಲಿರುವ ಭಾರತ ಗೆಲ್ಲಿಸಿ ರ್ಯಾಲಿಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಗ್ರಾಮೀಣ ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ವೀರಭದ್ರಪ್ಪ ಹಾಲಹರವಿ, ಮಹೇಶ ಟೆಂಗಿನಕಾಯಿ, ವೀರೇಶ ಸಂಗಳದ, ನಾಗೋಸಾ ಕಲಬುರ್ಗಿ, ರಂಗಾ ಬದ್ದಿ ಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement