ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಿವೇಶನ ನೀಡಲು ಸರ್ಕಾರಕ್ಕೆ ಮನವಿ

Mainashree
Updated On : 12 Feb 2014, 1:43 am

ಧಾರವಾಡ: ನಿವೇಶನ ರಹಿತ ವಿಶ್ವಕರ್ಮ ಸಮಾಜದ ಜನರಿಗೆ ಸರ್ಕಾರ ನಿವೇಶನಗಳನ್ನು ನೀಡಬೇಕು ಎಂದು  ಆಗ್ರಹಿಸಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳದಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರತಿ ಹಳ್ಳಿಗಳಲ್ಲಿ ನಮ್ಮ ಜನಾಂಗ ಐದರಿಂದ ಆರು ಮನೆತನಗಳನ್ನು ಮಾತ್ರ ಹೊಂದಿದ್ದು ಅಲ್ಲಿನ ರೈತರಿಗೆ, ಕೃಷಿ ಚಟುವಟಿಕೆಗೆ ಬೇಕಾದ ಸಲಕರಣೆಗಳನ್ನು ತಯಾರಿಸಿ ರೈತರು ನೀಡಿದ ದವಸ, ಧಾನ್ಯಗಳನ್ನು ಪಡೆದು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಇದುವರೆಗೆ ಈ ಸಮಾಜಕ್ಕೆ ಯಾವ ಯೋಜನೆಯಲ್ಲಿಯೂ ವಸತಿ ನಿವೇಶನಗಳನ್ನು ಕಲ್ಪಿಸಿಲ್ಲ. ಈ ಹಿಂದೆ 2007ರಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಈ ಸಮಾಜಕ್ಕೆ  ಮನೆ ಕಟ್ಟಲು ಅನುದಾನ ನೀಡಬೇಕೆಂದು ನೀಡಿರುವ ಆದೇಶ ಜಿಲ್ಲಾಡಳಿತದಿಂದ ಪಾಲನೆಯಾಗಿಲ್ಲ ಎಂದು ಆರೋಪಿಸಿದ್ದಾರೆ. ಭಾಸ್ಕರ ಬಡಿಗೇರ, ರತ್ನಾ ಬಡಿಗೇರ, ಮಂಜುನಾಥ ಬಡಿಗೇರ, ಸುರೇಶ ಬಡಿಗೇರ, ಅಶೋಕ ಬಡಿಗೇರ, ರಮೇಶ ಬಡಿಗೇರ, ಚಿದಾನಂದ ಅದರಗುಂಚಿ, ಗುರುನಾಥ ಬಡಿಗೇರ ಇದ್ದರು.
ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ
ಹುಬ್ಬಳ್ಳಿ: ಮಾರ್ಚ್ನಲ್ಲಿ ನಡೆಯಲಿರುವ ಹುಬ್ಬಳ್ಳಿ ತಾಲೂಕು 3ನೇ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಾಹಿತಿ, ಸಾಮಾಜಿಕ ಹೋರಾಟಗಾರ ಡಾ. ಕೆ. ಎಸ್. ಶರ್ಮಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಮಂತ್ರಣ ನೀಡಲಾಯಿತು. ಆಮಂತ್ರಣ ಸ್ವೀಕರಿಸಿದ ಡಾ. ಕೆ. ಎಸ್. ಶರ್ಮಾ, ಪರಿವರ್ತನೆ ಮತ್ತು ಸಮಾಜ ಪುನರಚನೆಗೆ ಪೂರಕವಾಗಿಟ್ಟಕೊಂಡು ಸಾಹಿತ್ಯ ರಚನೆ ಮಾಡಿದ್ದೇವೆ. ನನ್ನ ಸಾಹಿತ್ಯ ಸೇವೆ ಪರಿಗಣಿಸಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ಸಂತಸವಾಗಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಚಂದ್ರಶೇಖರ ಅಳಗುಂಡಗಿ, ಬಿ. ಎಸ್. ಸೊಪ್ಪಿನ, ಎಸ್. ವಿ. ಪಟ್ಟಣಶೆಟ್ಟಿ, ಅಮೃತ ಇಜಾರಿ, ವಿಕಾಸ ಸೊಪ್ಪಿನ, ಮಹೇಶ ಪತ್ತಾರ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement