ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಂ. ದೀನದಯಾಳ ಪುಣ್ಯಸ್ಮರಣೆ

Mainashree
Updated On : 12 Feb 2014, 1:43 am

ಹುಬ್ಬಳ್ಳಿ: ಪಂಡಿತ ದೀನದಯಾಳ ಉಪಾಧ್ಯಾಯರು ಒಬ್ಬ ದಾರ್ಶನಿಕ, ಕವಿ, ಚಿಂತಕ, ಇತಿಹಾಸಕಾರ, ಪತ್ರಕರ್ತ, ಅರ್ಥ ಶಾಸ್ತ್ರಜ್ಞರಾಗಿದ್ದರಲ್ಲದೇ ರಾಜಕೀಯ ಮುತ್ಸದ್ದಿಯಾಗಿದ್ದರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ ಹೇಳಿದರು.
ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಪಂ.ದೀನದಯಾಳ ಉಪಾಧ್ಯಾಯರ 46ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಗಾಧ ಪಾಂಡಿತ್ಯ ಹೊಂದಿದ್ದ ಅವರು ಸಂಘಟನಾ ಚತುರರಾಗಿದ್ದರು. ಏಕಾತ್ಮ ಬುದ್ಧಿಯಿಂದ ಎಲ್ಲರೊಡನೆ ವ್ಯವಹರಿಸುವುದರೊಂದಿಗೆ, ಸಿದ್ಧಾಂತ ತಪ್ಪಿ ನಡೆಯುತ್ತಿರಲಿಲ್ಲ. ದೇಶ ಸೇವೆಯೇ ಪರಮಪಾವನ ದೈವಿ ಕಾರ್ಯವೆಂಬ ನಂಬಿಕೆ ಹೊಂದಿದ್ದರೆ ಎಂದರು.
ರಾಷ್ಟ್ರಧರ್ಮ ಪ್ರಕಾಶನ ಸಂಸ್ಥೆಯನ್ನು ಬೆಳೆಸುವುದಕ್ಕೆ ಆಗಾಧ ಶ್ರಮ ವಹಿಸಿದ್ದರು. ಈ ಸಂಸ್ಥೆಯಿಂದ ಪ್ರಾರಂಭಗೊಂಡಿರುವ ಪಾಂಚಜನ್ಯ ವಾರಪತ್ರಿಕೆ ಈಗಲೂ ದೇಶಿ-ವಿದೇಶಿ ಓದುಗರನ್ನು ಹೊಂದಿದೆ. ನಂತರ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಸ್ವದೇಶ ದಿನಪತ್ರಿಕೆ, ರಾಷ್ಟ್ರಧರ್ಮ ಮಾಸ ಪತ್ರಿಕೆಯನ್ನು ಆರಂಭಿಸಿದ್ದರು. ಸಾಹಿತ್ಯ ಕೃಷಿಯಲ್ಲಿಯೂ ಅದ್ವೀತೀಯ ಸಾಧನೆ ಮಾಡಿದ್ದರು. ಇಂದಿನ ಯುವ ಪೀಳಿಗೆಗೆ ಅವರು ಮಾದರಿಯಾಗಿದ್ದಾರೆ.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ರಂಗಾ ಬದ್ಧಿ, ನಾಗೇಶ ಕಲಬುರ್ಗಿ, ಅರುಣಕುಮಾರ ಹುದಲಿ, ರಾಘವೇಂದ್ರ ರಾಮದುರ್ಗ, ವೀರೇಶ ಸಂಗಳದ ಮತ್ತಿತರರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement