ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಜೆಪಿ ಬಿಟ್ಟು ಹೋಗಿದ್ದು ಒಂದು ಕಹಿ ಘಟನೆ

Mainashree
Updated On : 12 Feb 2014, 1:42 am

ಬಿಜೆಪಿ ಬಿಟ್ಟು ಹೋದದ್ದು ಒಂದು ಕಹಿ ಘಟನೆ. ಈಗ ನಾವೆಲ್ಲರೂ ದೇಶಕ್ಕೆ ಸಮರ್ಥ ನಾಯಕತ್ವ ನೀಡಬೇಕೆಂಬ ಏಕಮಾತ್ರ ಉದ್ದೇಶದಿಂದ ಮತ್ತೆ ಬಿಜೆಪಿಯಲ್ಲಿ ಸೇರ್ಪಡೆಯಾಗಿದ್ದೇವೆ ಎಂದು ಸಿ. ಎಂ. ನಿಂಬಣ್ಣವರ ಹೇಳಿದರು.
ದೇಶಕ್ಕೆ ನಾಯಕತ್ವದ ಕೊರತೆ ಕಾಣುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದಲ್ಲಿ ಭಾರತ ಎಲ್ಲ ರಂಗದಲ್ಲಿಯೂ ಅಭಿವೃದ್ಧಿಯತ್ತ ದಾಪುಗಾಲು ಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅದಕ್ಕಾಗಿಯೇ ಕೆಜೆಪಿ, ಬಿಜೆಪಿಯಲ್ಲಿ ವಿಲೀನಗೊಂಡಿದೆ ಎಂದು ಸಮರ್ಥಿಸಿಕೊಂಡರು.
ಬಿಎಸ್ವೈಗೆ ಬಿಜೆಪಿ ಹಾಗೂ ಬಿಜೆಪಿಗೆ ಬಿಎಸ್ವೈ ಅವರ ಅವಶ್ಯಕತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಸಂಪೂರ್ಣ ಕುಂಠಿತಗೊಂಡಿದೆ. ಕಲಘಟಗಿ ತಾಲೂಕಿನ ರಸ್ತೆಗಳು ಹದಗೆಟ್ಟು ಹೋಗಿವೆ.
ಅಧಿಕಾರಿಗಳ ಮೇಲೆ ಕಾಂಗ್ರೆಸ್ ಶಾಸಕರಿಗೆ ನಿಯಂತ್ರಣವೇ ಇಲ್ಲ. ಬಡಜನರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಅವಶ್ಯಕ ಸಿಬ್ಬಂದಿ ಕೊರತೆ ಸಾಕಷ್ಟು ಕಂಡು ಬರುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ರೀತಿಯ ಬೇಜವಾಬ್ದಾರಿಯ ವಿರುದ್ಧ ಬಿಜೆಪಿ ಹಂತಹಂತವಾಗಿ ಹೋರಾಟ ನಡೆಸುತ್ತಲೇ ಸಾಗಿದೆ ಎಂದು ನಿಂಬಣ್ಣವರ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement