ಸುದ್ದಿ ಸಂಕ್ಷೇಪ
ಇಂದು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ
ಧಾರವಾಡ: ಇಲ್ಲಿಯ ಅಕ್ಕನ ಬಳಗದಲ್ಲಿ ಫೆ. 16 ರಂದು ಕರ್ನಾಟಕ ಕಲಾಲ ಶಿಕ್ಷಣ ಪರಿಷತ್ ವತಿಯಿಂದ ಕಲಾಲ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ 17ನೇ ವಾರ್ಷಿಕ ವಿದ್ಯಾರ್ಥಿವೇತನ ಸಮಾರಂಭ ಹಮ್ಮಿಕೊಂಡಿದೆ. ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರಿಕರ, ಪಿ.ಪಿ. ಕಲಾಲ ಆಗಮಿಸುವರು.
ಇಂದು ಪೂರ್ಣಪ್ರಜ್ಞಾ ವಿದ್ಯಾಪೀಠದ ಸಮ್ಮೇಳನ
ಧಾರವಾಡ: ಇಲ್ಲಿಯ ಬಸವರಾಜ ಹೊರಟ್ಟಿ ಪೂರ್ಣಪ್ರಜ್ಞಾ ವಸತಿ ವಿದ್ಯಾಪೀಠದ 9ನೇ ವಾರ್ಷಿಕ ಸ್ನೇಹ ಸಮ್ಮೇಳನ ಫೆ. 16ರ ಸಂಜೆ 4.30 ಕ್ಕೆ ಸಾಯಿ ಸಭಾಭವನದಲ್ಲಿ ನಡೆಯಲಿದೆ. ಮಾಜಿ ಸಚಿವ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ, ಶಾಸಕರಾದ ಎನ್.ಎಚ್. ಕೋನರಡ್ಡಿ, ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಪಾಲ್ಗೊಳ್ಳುವರು.
ಇಂದು ದೀಕ್ಷಾ ಬೋಧನೆ
ಧಾರವಾಡ: ಇಲ್ಲಿನ ಜೆಎಸ್ಸೆಸ್ ಇಗ್ನೋ ಅಧ್ಯಯನ ಕೇಂದ್ರದಲ್ಲಿ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ದೀಕ್ಷಾಬೋಧನೆ ಕಾರ್ಯಕ್ರಮ ಫೆ. 16 ರಂದು 11ಕ್ಕೆ ಕಾಲೇಜಿನ ನಲಂದಾ ಸಭಾಭವನದಲ್ಲಿ ನಡೆಯಲಿದೆ ಎಂದು ಡಾ. ಅಜಿತ್ ಪ್ರಸಾದ ತಿಳಿಸಿದ್ದಾರೆ.
ಇಂದು ಕೃತಿ ಬಿಡುಗಡೆ
ಧಾರವಾಡ: ಸಾಹಿತಿ ಅಜನಾಳ ಭೀಮಾಶಂಕರ ಬರೆದ ಭಾವ ಬೆಳಂದಿಗಳು ಎಂಬ ಕವನ ಸಂಕಲನ ಬಿಡುಗಡೆ ಸಮಾಂಭ ಫೆ. 16ರ ಸಂಜೆ 6ಕ್ಕೆ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯಲಿದೆ.