ಜೀವಮಾನ ಸಾಧನೆಗೆ ಡಾ. ಜೋಶಿಗೆ ರಾಷ್ಟ್ರೀಯ ಪುರಸ್ಕಾರ
ಹುಬ್ಬಳ್ಳಿ: ಐದು ದಶಕಗಳ ಕಾಲ ನೇತ್ರ ಚಿಕಿತ್ಸೆಯಲ್ಲಿ ಅನುಪಮ ಸೇವೆ ಸಲ್ಲಿಸಿದ ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ಅವರಿಗೆ ಅಖಿಲ ಭಾರತೀಯ ನೇತ್ರ ತಜ್ಞರ ಸಂಘದಿಂದ ಜೀವಮಾನ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ. ಜೋಶಿ ಅವರಿಗೆ 2013-14ನೇ ಸಾಲಿನ ಪ್ರಶಸ್ತಿಯನ್ನು ನೇತ್ರ ತಜ್ಞರ 79ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ಭಾರತೀಯ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ. ಖುರೇಶ ಮಸ್ಕಟಿ ತಿಳಿಸಿದ್ದಾರೆ.