ನಮೋ ಟೀ ಸ್ಟಾಲ್ ಉದ್ಘಾಟಿಸಿದ ಮಾಳವಿಕಾ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 16
ಬಿಜೆಪಿ ರಾಜ್ಯ ಸಹವಕ್ತಾರರಾದ ಮಾಳವಿಕಾ ಅವಿನಾಶ ಹುಬ್ಬಳ್ಳಿ ದಾಜೀಬಾನ್ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದ ಹತ್ತಿರ ಭಾನುವಾರ ನಮೋ ಟೀ ಸ್ಟಾಲ್ ಉದ್ಘಾಟಿಸಿದರು.
ನೆರೆದವರಿಗೆ ಚಹಾ ಹಂಚಿದ ಅವರು ನಂತರ ಮಾತನಾಡಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾಗುವುದರಲ್ಲಿ ಸಂದೇಹವೇ ಇಲ್ಲ. ಮೋದಿ ಪ್ರಧಾನಿಯಾದರೆ ಮಾತ್ರ ದೇಶ ಅಭಿವೃದ್ಧಿಯತ್ತ ಮುಖ ಮಾಡಲು ಸಾಧ್ಯ ಎಂದರು.
ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಮಿತಿ ಮೀರಿದೆ. ಕಾಂಗ್ರೆಸ್ ಭ್ರಷ್ಟಾಚಾರ ಮಿತಿ ಮೀರಿದೆ. ಇಂಥ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಗೆ ಮತ ಹಾಕುವ ಮೂಲಕ ನರೇಂದ್ರ ಮೋದಿ ಕೈಬಲ ಪಡಿಸಬೇಕು ಎಂದರು. ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭಾರತಿ ಮಗ್ದುಮ್, ಲತಾ, ಜ್ಯೋತಿ ಜೋಶಿ, ರಾಧಾಬಾಯಿ ಸಫಾರೆ, ಮಹಾನಗರ ಮಹಿಳಾ ಜಿಲ್ಲಾಧ್ಯಕ್ಷೆ ಮೀನಾಕ್ಷಿ ವಂಟಮೂರಿ ಮತ್ತಿತರರು ಉಪಸ್ಥಿತರಿದ್ದರು.