ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಬಕಾರಿ ಕರ ಭಾರ ಹಿಂಪಡೆಯಲು ಒತ್ತಾಯ

Mainashree
Updated On : 18 Feb 2014, 10:10 am

ಹುಬ್ಬಳ್ಳಿ: ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಅಬಕಾರಿ ಚಿಲ್ಲರೆ ಮದ್ಯ ಮಾರಾಟಗಾರರ ಮೇಲೆ ಸಹಿಸಲಾರದ ಕರ ಭಾರ ಹಾಕಿದ್ದು ಆಘಾತಕರ ಎಂದಿರುವ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕೋಶಾಧ್ಯಕ್ಷ ಟಿ. ಎಂ. ಮೆಹರವಾಡೆ, ಕರ ಭಾರ ಹಿಂಪಡೆಯುವಂತೆ ಒತ್ತಾಯಿಸಲು ಉಗ್ರ ಹೋರಾಟಕ್ಕೆ ಸಜ್ಜಾಗುವುದಾಗಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ದಿನ ನಿಗದಿ ಪಡಿಸಲು ಇದೇ ಫೆ. 20ರಂದು ಬೆಂಗಳೂರಿನಲ್ಲಿ ಎಲ್ಲ ಜಿಲ್ಲಾ ಸಂಘಟನೆಗಳ ಸಭೆ ಕರೆಯಲಾಗಿದೆ ಎಂದರು.
ಪ್ರಸಕ್ತ ಸಾಲಿಗೆ ರು. 2440 ಕೋಟಿ ಅಧಿಕ ಆದಾಯ ಬಯಸಿದ್ದು ಈಗಾಗಲೇ ರಾಜ್ಯ ಸರ್ಕಾರ 2001ರಿಂದ ವಾಣಿಜ್ಯ ತೆರಿಗೆಯನ್ನು ಉತ್ಪಾದನಾ ಘಟಕದಲ್ಲಿಯೇ ತೆಗೆದುಕೊಳ್ಳುತ್ತಿದ್ದು, ಒಂದೇ ಹಂತದಲ್ಲಿ ಆದಾಯ ಯಾವುದೇ ಸೋರಿಕೆಯಿಲ್ಲದೇ ಬರುತ್ತಿದ್ದು ಹೊಸದಾಗಿ ಪರಿಚಯಿಸಿದ ಮೌಲ್ಯಾಧಾರಿತ ತೆರಿಗೆ ಶೇ. 5.5ರಷ್ಟು ತೆಗೆದುಕೊಳ್ಳುವುದು ಸರಳೀಕೃತವಾದ ಪದ್ಧತಿಗೆ ಮಾರಕವಾಗಬಹುದು. ಹೀಗಾಗಿ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯಿಂದ ಮುಕ್ತಗೊಳಿಸಬೇಕು. ಸನ್ನದ್ದನ್ನು ಸ್ಥಳಾಂತರಿಸುವುದರ ಸಲುವಾಗಿ ಸನ್ನದ್ದಿನ ಶುಲ್ಕ ಶೇ. 25 ಇದ್ದದ್ದು ಶೇ. 50ಕ್ಕೆ ತಿದ್ದುಪಡಿ ತಂದಿದ್ದು ಅದನ್ನು ಮೊದಲಿನ ಶೇ. 25ಕ್ಕೆ ಇರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
2003ರಿಂದ 2013ರ ವರೆಗೂ ಅಬಕಾರಿ ಆದಾಯ ಗಣನೀಯವಾಗಿ ಏರಿದೆ. ಆದಾಗ್ಯೂ ಮುಖ್ಯಮಂತ್ರಿಗಳು ಈ ವರ್ಷ ರು. 2440 ಕೋಟಿ ಆದಾಯ ನಿರೀಕ್ಷಿಸಿದ್ದಾರೆ. ಇದರೊಟ್ಟಿಗೆ ಅಪಾರ ಕರ ಭಾರ ಹಾಕಿರುವ ಪರಿಣಾಮ ಬೆಲೆ ಏರಿಕೆಯಾಗಿ, ಪಕ್ಕದ ರಾಜ್ಯಗಳಿಂದ ಅಕ್ರಮ ಮದ್ಯ ಸಾಗಾಟ, ಅಕ್ರಮ ಮದ್ಯ ತಯಾರಿಕೆ ದಂಧೆ ಶುರುವಾಗಲಿದೆ ಎಂದ ಮೆಹರವಾಡೆ, ಸರ್ಕಾರ ತನ್ನ ನಿರ್ಧಾರ ಹಿಂಪಡೆಯಲಿ ಎಂದರು.
ರಮೇಶ ಶಾಲಗರ, ಸಂತೋಷ ಶೆಟ್ಟಿ, ಶ್ರೀಕಾಂತ ಹಬೀಬ, ಶಂಕರ ಮುದುಗಲ್, ಸುನೀಲ ವಾಳ್ವೇಕರ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement