ಧಾರವಾಡ ತಾಲೂಕು ಸಮ್ಮೇಳನ ಸರ್ವಾಧ್ಯಕ್ಷ ನಾಡಗೌಡರಿಗೆ ಅಹ್ವಾನ
ಧಾರವಾಡ: ಮಾ. 1ರಂದು ತಾಲೂಕಿನ ಹೆಬ್ಬಳ್ಳಿಯಲ್ಲಿ ನಡೆಯಲಿರುವ 3ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ದುಷ್ಯಂತ ನಾಡಗೌಡ ಆಯ್ಕೆಯಾಗಿದ್ದಾರೆ. ಹೆಬ್ಬಳ್ಳಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸಾಹಿತ್ಯ ಪರಿಷತ್ ವತಿಯಿಂದ ಸರ್ವಾಧ್ಯಕ್ಷರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ತಾಲೂಕು ಕಸಾಪ ಕಾರ್ಯಕಾರಿ ಮಂಡಳಿ ಕಸಾಪ ಜಿಲ್ಲಾಧ್ಯ ಲಿಂಗರಾಜ ಅಂಗಡಿ ನೇತೃತ್ವದಲ್ಲಿ ಭಾನುವಾರ ದುಷ್ಯಂತ ನಾಡಗೌಡ ದಂಪತಿಯನ್ನು ಆಹ್ವಾನಿಸಿ ಸತ್ಕರಿಸಿತು. ಶಂಕರ ಹಲಗತ್ತಿ, ಮೋಹನ ನಾಗಮ್ಮನವರ, ಗುರು ತಿಗಡಿ, ವೈ.ಎಂ. ಭಜಂತ್ರಿ, ಅನೀಲ ದೇಸಾಯಿ, ಗಿರೀಶ ಪದಕಿ, ಎಂ.ಡಿ. ವಕ್ಕುಂದ, ಎಚ್.ಎಸ್. ಬಿರಾದಾರ, ಎಚ್.ಎಸ್. ಬಡಿಗೇರ, ಎಲ್.ಐ. ಲಕ್ಕಮ್ಮನವರ, ಎಂ.ಎಸ್. ನರೇಗಲ್, ವೈ.ಆರ್. ರಾಯನಗೌಡರ, ಎಂ.ಜಿ. ಸುಬೇದಾರ, ಕೆ.ಎಸ್. ದೊಡವಾಡ, ಆರ್.ಎಸ್. ಪಾಟೀಲ ಇದ್ದರು.