ಧಾರವಾಡದಲ್ಲಿ ಕೌಟಿಲ್ಯ ರಸಪ್ರಶ್ನೆ ಸ್ಪರ್ಧೆ
ಧಾರವಾಡ: ಧಾರವಾಡದಲ್ಲಿ ಇತ್ತೀಚೆಗೆ ದೇಶಪಾಂಡೆ ಕೌಟಿಲ್ಯ ಫೆಲೊಶಿಪ್ ಪ್ರೋಗ್ರಾಮನಡಿ ಕೌಟಿಲ್ಯ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ಅತಿಥಿಯಾಗಿದ್ದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಸಂತ ಲದ್ವಾ ಮಾತನಾಡಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದು, ಪದವೀದರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಣಪ್ಪುರಂ ಫೈನಾನ್ಸ್‌ನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಶಶಿಧರ ಪಾಟೀಲ, ವಿದ್ಯಾರ್ಥಿಗಳು ಸರಿಯಾದ ಗುರಿ ಹೊಂದಿರಬೇಕು ಮತ್ತು ಗುರ್ನಿ ತಲುಪುವದರೆಡೆಗೆ ನಿಷ್ಠೆಯಿಂದ ಕಾರ್ಯಪ್ರವತ್ತರಾಗಬೇಕು ಎಂದು ಸಲಹೆ ನೀಡಿದರು. ಶೇಷಗಿರಿ ಕುಲಕರ್ಣಿ ಹಾಗೂ ನೀಲಂ ಮಹೇಶ್ವರಿ ಅತಿಥಿಗಳಾಗಿದ್ದರು. ದೇಶಪಾಂಡೆ ಫೌಂಡೆಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ ಝಾ ಅಧ್ಯಕ್ಷತೆ ವಹಿಸಿದ್ದರು.
ವಿಜೇತರು: ಹುಬ್ಬಳ್ಳಿಯ ಜೆಜಿ ಕಾಮರ್ಸ್ ಕಾಲೇಜು ಮತ್ತು ಧಾರವಾಡದ ಜೆಎಸ್‌ಎಸ್ ಕಾಲೇಜು (ಪ್ರಥಮ), ಗೋಕಾಕನ ಜಿಎಫ್‌ಜಿಸಿ ಕಾಲೇಜು ಮತ್ತು ಬೆಳಗಾವಿಯ ಸಮಿತಿ ಕಾಲೇಜು (ದ್ವಿತೀಯ), ಚಿಕ್ಕೋಡಿಯ ಜಿಎಫ್‌ಜಿಸಿ ಕಾಲೇಜು ಮತ್ತು ಹುಬ್ಬಳ್ಳಿಯ ಜೆಜಿ ಕಾಮರ್ಸ್ ಕಾಲೇಜು (ತೃತೀಯ).