ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಲೂಸಿ ಸಾಲ್ಡಾನಾ ಕಾರ್ಯ ಶ್ಲಾಘನೀಯ

Vishwanath S
Updated On : 19 Feb 2014, 11:00 am

ಧಾರವಾಡ: ತಾಲೂಕಿನ 33 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದತ್ತಿನಿಧಿ ಸ್ಥಾಪಿಸಿ, ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿರುವ ದತ್ತಿದಾನಿ ಲೂಸಿ ಸಾಲ್ಡಾನಾ ಅವರ ಕಾರ್ಯ ಶ್ಲಾಘನೀಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ವಿದ್ಯಾವರ್ಧಕ ಸಂಘದಲ್ಲಿ ಜರುಗಿದ ಲೂಸಿ ಸಾಲ್ಡಾನಾ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಫೂರ್ತಿಯಿಂದ ಸ್ವಾರ್ಥರಹಿತವಾಗಿ ಸಮಾಜದ ಒಳಿತಿಗೆ ಕೆಲಸ ಮಾಡುತ್ತಿರುವ ಇಂಥವರ ಸೇವೆ ಉಳಿದ ಶಿಕ್ಷಕರಿಗೂ ಮಾದರಿ. ಮಕ್ಕಳ ಶೈಕ್ಷಣಿಕ ಪ್ರಗತಿಯ ಚಿಂತಕರಾಗಿ, ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ಇವರು ದತ್ತಿ ಯೋಜನೆ ಪ್ರಾರಂಭಿಸಿದ್ದು ಫಲಪ್ರದವಾಗಲಿ ಎಂದು ಹಾರೈಸಿದರು. ಧಾರವಾಡ ತಾಲೂಕು ಕಸಾಪ ಅಧ್ಯಕ್ಷ ಗುರು ತಿಗಡಿ ಅಪ್ನಾದೇಶ ಬಳಗದಿಂದ ಆಯ್ದ ತಾಲೂಕಿನ ಬಡ ಅಂಗವಿಕಲ ಮಕ್ಕಳಿಗೆ ಸ್ವೇಟರ್ ವಿತರಿಸಿದರು. ಪ್ರಗತಿಗೆ, ಅಭಿವೃದ್ಧಿಗೆ ಕೇವಲ ಸರ್ಕಾರದ ನೆರವು ನಂಬಿ ಕೂರದೇ ಸ್ವಯಂ ಸೇವೆಯಿಂದ ಸಮಾಜದ ಪ್ರಗತಿಗೆ ಶ್ರಮಿಸುತ್ತಿರುವ ಅನೇಕರು ನಮ್ಮ ಮಧ್ಯ ಇದ್ದಾರೆ. ಅಂತವರಲ್ಲಿ ಲೂಸಿ ಸಾಲ್ಡಾನಾ ಒಬ್ಬರು. ಆರ್ಥಿಕವಾಗಿ ಸಬಲರಾಗಿರುವ ಪ್ರತಿಯೊಬ್ಬರೂ ಮುಂದೆ ಬಂದು ಪ್ರಾಥಮಿಕ ಶಿಕ್ಷಣಕ್ಕೆ ಸಹಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಅಪ್ನಾದೇಶ ಬಳಗ ಕ್ರಿಯಾಶೀಲವಾಗಿ ಕೆಲಸ ಮಾಡಲಿದೆ ಎಂದರು. ಮುಖ್ಯ ಅತಿಥಿ ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ ಜೋಶಿ, ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿ.ಪಿ. ಜೇವೂರ ಸ್ಮಾರಕ ಕಿವುಡು, ಮೂಕ ಮಕ್ಕಳು ವಸತಿ ಶಾಲೆ ಮಕ್ಕಳು ದೇಶಭಕ್ತಿ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಶಂಕರ ಹಲಗತ್ತಿ, ಅಪ್ನಾದೇಶ ಜಿಲ್ಲಾ ಸಂಚಾಲಕ ಎಲ್.ಐ. ಲಕ್ಕಮ್ಮನವರ, ಸಾಹಿತಿ ಮೋಹನ ನಾಗಮ್ಮನವರ, ಎ.ಬಿ. ಚಪ್ಪರಬಂದ, ವೈ. ಬಿ. ಕಡಕೋಳ, ವಿ.ಎನ್. ಕೀರ್ತಿವತಿ, ನಾಗಪ್ಪ ತಿರ್ಲಾಪುರ, ಚಂದ್ರು ತಿಗಡಿ, ಎಂ. ಜಿ. ಸುಬೇದಾರ, ರಮೇಶ ಮಾಳಗಿಮನಿ, ಆರ್.ಬಿ. ಮಂಗೋಡಿ ಸಮುದ್ರಿ, ಲಿಂಗರಾಜ ರಾಮಾಪುರ, ಎಸ್.ಎಸ್. ಜೋಶಿ, ವೈ.ವಿ. ಶಿಂಪಿ, ರಾಜಶೇಖರ ಹೊನ್ನಪ್ಪನವರ, ಎಸ್.ವೈ. ಕಟ್ಟಿಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement