ವಿವಿಧ ಕ್ಷೇತ್ರಗಳಲ್ಲಿ ದಿ. ಹರ್ಡೇಕರ್ ಮಂಜಪ್ಪ ಕ್ರಾಂತಿಕಾರಿ ಕೆಲಸ
ಧಾರವಾಡ: ಸ್ವಾತಂತ್ರ್ಯ ಹೋರಾಟದಲ್ಲ ಸಕ್ರಿಯವಾಗಿದ್ದ ಹರ್ಡೇಕರ್ ಮಂಜಪ್ಪ ಅವರು ಗ್ರಾಮೋದ್ಧಾರ, ಸ್ತ್ರೀ ಸಮಾನತೆ, ಜಾತಿರಹಿತ ಸಮಾಜದ ನಿರ್ಮಾಣ, ಪತ್ರಿಕಾರಂಗದ ಏಳ್ಗೆಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ ಎಂದು ಸಿಎಸ್‌ಐ ವಾಣಿಜ್ಯ ಕಾಲೇಜು ಪ್ರಾಧ್ಯಾಪಕ ಡಾ. ಶಂಭೂ ಹೆಗಡಾಳ ಹೇಳಿದರು.
ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟದಿಂದ ಹರ್ಡೇಕರ್ ಮಂಜಪ್ಪ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ. ಪಂಚಾಕ್ಷರಿ ಹಿರೇಮಠ ಮಾತನಾಡಿದರು.
ವಚನ ಗಾಯನದಲ್ಲಿ ಹೇಮಂತ ಲಮಾಣಿ ಒಬ್ಬರ ಮನವ ನೋಯಿಸಿ, ನಡೆಯಲರಿಯದೇ-ನುಡಿಯಲರಿಯದೇ, ಅಂತರಂಗದಲ್ಲಿ ಅರಿವಾದೊಡೇನಯ್ಯ, ನೀನೆನಗೆ ಗುರುವಾದೊಡೆ, ತನು ಶುದ್ಧ ಮನ ಶುದ್ಧ ಹೀಗೆ ಶರಣರ ವಚನಗಳನ್ನು ಪ್ರಸ್ತುತಪಡಿಸಿದರು. ಸುರೇಶ ನಿಡಗುಂದಿ ತಬಲಾ, ಎಂ.ಆರ್. ಬಾವಾಖಾನ ಹಾರ್ಮೋನಿಯಂ ಸಾಥ್ ನೀಡಿದರು.
ಪ್ರೊ. ದುಷ್ಯಂತ ನಾಡಗೌಡ, ಪ್ರೊ.ಎ.ಜಿ. ಸಬರದ, ಮಲ್ಲಿಕಾರ್ಜುನ ಹಿರೇಮಠ, ಡಾ. ಎನ್.ಎಸ್. ರಘುನಾಥ, ಹ.ಶಿ. ಭೈರನಟ್ಟಿ, ಎ.ಸಿ. ಮುಂಡರಗಿ, ಪ್ರೊ. ಸಿ.ಆರ್. ಜೋಶಿ, ಎಸ್.ಆರ್. ಭಟ್ಕಳ, ಶ್ರೀಶೈಲ ರಾಚಣ್ಣವರ, ಎಂ.ಆರ್. ಪಾಲ್ತಿ, ಬಿ.ಪಿ. ಕಲ್ಯಾಣಶೆಟ್ಟಿ, ಎಸ್.ಎಂ. ದೇಶಪಾಂಡೆ, ಎಸ್.ಎಸ್. ಪೊಲೀಸಗೌಡರ, ಬಿ.ಐ. ಈಳಿಗೇರ, ಕಲಾವತಿ ಸವಣೂರ ಇದ್ದರು. ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ನಿರೂಪಿಸಿದರು.