ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ಇಂದುಜಾನಪದ ಉತ್ಸವ

Vishwanath S
Updated On : 22 Feb 2014, 10:56 am

ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಗ್ಗಿ-ಹುಗ್ಗಿ ಯೋಜನೆಯಡಿ ಫೆ. 22ರ ಸಂಜೆ 6ಕ್ಕೆ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಜಾನಪದ ಉತ್ಸವ ಜರುಗಲಿದೆ.
ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ ಉತ್ಸವ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ, ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ಪಿ. ಮಾಯಾಚಾರಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಜಾನಪದ ವಿದ್ವಾಂಸ ಬಸವಲಿಂಗಯ್ಯ ಹಿರೇಮಠ ಜಾನಪದ ಸಂಗೀತ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಉತ್ಸವದಲ್ಲಿ ವಿವಿಧ 11 ಜಾನಪದ ಕಲಾ ಪ್ರಕಾರ ತಂಡಗಳು ಗ್ರಾಮೀಣರ ಸಾಂಪ್ರದಾಯಿಕ ಜನಪದ ಸೊಬಗು ಪ್ರದರ್ಶಿಸಲಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಪಾರ್ವತೆವ್ವ ಹೊಂಗಲ (ಸಂಪ್ರದಾಯ ಪದಗಳು) ಸೇರಿ 13 ಕಲಾ ತಂಡ ಪಾಲ್ಗೊಳ್ಳಲಿವೆ. ಮಂಡ್ಯ ಸವಿತಾ ಕೀರುಕುನಯ್ಯಾ ಪೂಜಾ ಕುಣಿತ, ಹಾನಗಲ್ ಡಾ. ಆನಂದಪ್ಪ ಜೋಗಿ ಕಿನ್ನರಿ ಜೋಗಿ ಪದಗಳು, ಕವಲಗೇರಿ ರಾಜೇಸಾಬ ದೊಡ್ಡಮನಿ ಕರಡಿ ಮೇಳ, ಹುಬ್ಬಳ್ಳಿ ಡಾ. ರಾಮು ಮೂಲಗಿ ಹಂತಿ ಪದಗಳು, ಗೋಪನಕೊಪ್ಪ ಹನುಮಂತಪ್ಪ ಬಬಲ್, ದಾಲಪಟ್ಟಿ, ಧಾರವಾಡ ವಿಶ್ವೇಶ್ವರಿ ಹಿರೇಮಠ ಸಂಪ್ರದಾಯ ಜಾನಪದ ಸೊಬಗು, ಮುಕುಂದ ಕುಲಕರ್ಣಿ, ಹಾವೇರಿ ಪರಶುರಾಮ ಅಂಗೂರ ಜನಪದ ಸಂಗೀತ, ಶೀಗಿಹಟ್ಟಿ ರಾಮವ್ವ ಲಮಾಣಿ ಲಂಬಾಣಿ ನೃತ್ಯ, ಬೆಳವಟಗಿ ಸಾವಿತ್ರಿ ಪೂಜಾರ ಗೀಗೀ ಪದಗಳು, ಮನಗುಂಡಿ ಪುಂಡಲೀಕ ಮಾದರ ಜಗ್ಗಲಗಿ ಪ್ರದರ್ಶನ ನೀಡಲಿದ್ದಾರೆ ಎಂದು ಬಿ.ಡಿ. ಹಿರೇಗೌಡರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement