ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬೋನಿಗೆ ಬಿದ್ದವು ಕಿತಾಪತಿ ಮಂಗ್ಯಾ...

Vishwanath S
Updated On : 23 Feb 2014, 12:29 pm

ಹುಬ್ಬಳ್ಳಿ: ಅವಳಿ ನಗರದ ಜನತೆಯನ್ನು ವಿಪರೀತವಾಗಿ ಕಾಡುತ್ತಿದ್ದ ಮಂಗಗಳನ್ನು ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಶನಿವಾರ ಕಾರ್ಯಾಚರಣೆ ನಡೆಸಿ ಸುಮಾರು 30ಕ್ಕೂ ಹೆಚ್ಚು ಮಂಗಗಳನ್ನು ಹಿಡಿದು ಯಲ್ಲಾಪುರದ ಕಾಡಿಗೆ ಬಿಟ್ಟರು.
ಮಂಗಗಳನ್ನು ಹಿಡಿಯುವಲ್ಲಿ ಪರಿಣಿತಿ ಹೊಂದಿರುವ ಬದಾಮಿಯ ಮೃತ್ಯುಂಜಯ ಗಣಾಚಾರಿ ಮಂಗಗಳನ್ನು ಹಿಡಿದರು. ಹಳೇಹುಬ್ಬಳ್ಳಿ, ಅಯೋಧ್ಯಾನಗರ, ಫಾರೆಸ್ಟ್ ಕಾಲೋನಿ ಪ್ರದೇಶದಲ್ಲಿ ಕಾಟ ಕೊಡುತ್ತಿದ್ದ ಮಂಗಗಳನ್ನು ಹಿಡಿಯಲಾಯಿತು.
ಈ ಮಂಗಗಳನ್ನು ಮನೆಯೊಳಗೆ ನುಗ್ಗಿ ಆಹಾರ ತಿನ್ನುವುದು, ಹೆಂಚಿನ ಮನೆಗಳಿದ್ದರೆ ಹೆಂಚು ತೆಗೆದು ಒಳಗೆ ನುಗ್ಗಿ ಆಹಾರ ಚೆಲ್ಲಾಪಿಲ್ಲಿ ಮಾಡುವುದು, ದಾರಿ ಹೋಕರ ಕೈಯಲ್ಲಿದ್ದ ಕೈಚೀಲಗಳನ್ನು ಎಗರಿಸಿಕೊಂಡು ಹೋಗುವುದು, ಕೆಲವೊಬ್ಬರ ಮೇಲೆ ದಾಳಿಯನ್ನೂ ಸಹ ಮಾಡಿದ್ದವು. ಮಂಗಗಳ ಉಪಟಳದ ಬಗ್ಗೆ ಸಾರ್ವಜನಿಕರು ಬೇಸತ್ತು ಹೋಗಿದ್ದರು. ಈ ಬಗ್ಗೆ ಪಾಲಿಕೆಯ ಆರೋಗ್ಯ ವಿಭಾಗಕ್ಕೂ ದೂರು ನೀಡಿದ್ದರು. ಆದರೆ ಮಂಗ ಹಿಡಿಯುವವರಿಲ್ಲ ಎಂದು ಕಾಲ ಕಳೆದಿದ್ದ ಪಾಲಿಕೆ ಇದೀಗ ಮಂಗಗಳನ್ನು ಬೋನಿಗೆ ಹಾಕುವ ಮೂಲಕ ಜನರು ನೆಮ್ಮದಿಯಿಂದ ಇರುವಂತೆ ಮಾಡಿದೆ.
ಮಂಗಗಳು ದಾಳಿ ಮಾಡಿ ಗಾಯಗೊಳಿಸಿದರೆ ಆಸ್ಪತ್ರೆಯಿಂದ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಇದೇ ವೇಳೆ ಮಂಗಗಳನ್ನು ಪ್ರಚೋದಿಸಬಾರದು. ಒಂದೊಮ್ಮೆ ಮಂಗಗಳ ದಾಳಿ ನಡೆದರೆ ಪಾಲಿಕೆಗೆ ದೂರು ನೀಡುವಂತೆ ಆರೋಗ್ಯಾಧಿಕಾರಿ ಪ್ರಭು ಬಿರಾದಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement