ನಾಳೆಯಿಂದ ಬಿಇ, ಡಿಪ್ಲೊಮಾ ವಿದ್ಯಾರ್ಥಿಗಳ ಸಂದರ್ಶನ
ಹುಬ್ಬಳ್ಳಿ: ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ(ಎಜಿಎಂಆರ್)ದಲ್ಲಿ ಫೆ. 26 ಹಾಗೂ 27 ರಂದು ಬಿಇ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಂದರ್ಶನ ಏರ್ಪಡಿಸಲಾಗಿದೆ.
ಫೆ. 26ರಂದು ಅಂತರರಾಷ್ಟ್ರೀಯ ಖ್ಯಾತಿಯ ಫೆರೋಲೆಸ್ ಕಂಪನಿ, ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿಇ ಸಿವಿಲ್ ಪೂರೈಸಿದ ವಿದ್ಯಾರ್ಥಿಗಳ ಸಂದರ್ಶನ ನಡೆಸಲಿದೆ. ಸಂಸ್ಥೆಯ ವಿದ್ಯಾರ್ಥಿಗಳಿಗಷ್ಟೇ ಈ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆಯ್ಕೆಯಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರು. 30 ಸಾವಿರ ಸಂಭಾವನೆ ನೀಡಲಿದೆ.
ಇದೇ ರೀತಿಯಾಗಿ ಫೆ. 27ರಂದು ಜೈನ್ ಇರಿಗೇಶನ್ ಗ್ರೂಪ್ನವರು ಡಿಪ್ಲೊಮಾ ವಿಭಾಗದಲ್ಲಿ ಇ ಆ್ಯಂಡ್ ಸಿ, ಇ ಆ್ಯಂಡ್ ಇ ಹಾಗೂ ಸಿಎಸ್ ಪೂರೈಸಿದ ವಿದ್ಯಾರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಈ ಸಂದರ್ಶದಲ್ಲಿ ಧಾರವಾಡ ಜಿಲ್ಲೆಯ ಎಲ್ಲ ಡಿಪ್ಲೊಮಾ ಸಿವಿಲ್ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕಂಪನಿ ರು. 12 ಸಾವಿರ ಸಂಭಾವನೆ ಸಂದಾಯ ಮಾಡಲಿದೆ.
ಮಾಹಿತಿಗೆ ಪ್ರಸನ್ನಕುಮಾರ ಮೊ. 9844025356ಗೆ ಸಂಪರ್ಕಿಸಬೇಕು ಎಂದು ಕೋರಲಾಗಿದೆ.
ಶ್ರೀಗಳ ಸಂಕಲ್ಪ: ಉನ್ನತ ವ್ಯಾಸಂಗ ಹೊಂದಿದ ವಿದ್ಯಾರ್ಥಿಗಳಿಗೆ ಸುಲಭವಾಗಿ ಉದ್ಯೋಗಗಳು ಲಭಿಸುವಂತಾಗಬೇಕೆಂಬ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸಂಕಲ್ಪದಂತೆ ಸಂಸ್ಥೆ ಈಗಾಗಲೇ ಅನೇಕ ಕಂಪನಿಗಳ ಮೂಲಕ ಸಂದರ್ಶನ ಪ್ರಕ್ರಿಯೆ ನಡೆಸಿ ನೂರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ವೇದಿಕೆ ಒದಗಿಸಿಕೊಟ್ಟಿದೆ. ಈಗಾಗಲೇ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಖ್ಯಾತಿ ಅನೇಕ ಕಂಪನಿಗಳು ಸಂಸ್ಥೆಗೆ ಭೇಟಿ ನೀಡಿ ಸಂದರ್ಶನ ನಡೆಸುವ ಇಂಗಿತ ವ್ಯಕ್ತಪಡಿಸಿವೆ ಎಂದೂ ಸಂಸ್ಥೆ ತಿಳಿಸಿದೆ.